ನವದೆಹಲಿ : ಸಂಚಾರ ನಿಯಮ ಉಲ್ಲಂಘನೆ : SPIDER MAN ಬಂಧನ…!

ನವದೆಹಲಿ:

   ದ್ವಾರಕಾ ರಸ್ತೆಯಲ್ಲಿ ಕಾರ್‌ ಬಾನೆಟ್‌ ಮೇಲೆ ಸ್ಪೈಡರ್‌ ಮ್ಯಾನ್‌’ ಬಟ್ಟೆ ತೊಟ್ಟು ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

   ಕಾರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ದೆಹಲಿ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ‘ಸ್ಪೈಡರ್‌ ಮ್ಯಾನ್‌’ ಬಟ್ಟೆ ಧರಿಸಿದ್ದ 20 ವರ್ಷದ ನಜಾಫ್‌ಗಢದ ನಿವಾಸಿ ಆದಿತ್ಯ ಹಾಗೂ ಕಾರು ಚಲಾಯಿಸುತ್ತಿದ್ದ ಮಹಾವೀರ್ ಎನ್‌ಕ್ಲೇವ್‌ನಲ್ಲಿ ನೆಲೆಸಿರುವ 19 ವರ್ಷದ ಗೌರವ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಅಪಾಯಕಾರಿ ವಾಹನ ಚಾಲನೆ, ಮಾಲಿನ್ಯ ಪ್ರಮಾಣ ಪತ್ರ ಇಲ್ಲದೇ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಇದ್ದಲ್ಲಿ ವಾಹನದ ಮಾಲೀಕರು ಮತ್ತು ಚಾಲಕರಿಗೆ ಗರಿಷ್ಠ ರೂ. 26,000 ದಂಡ ಅಥವಾ ಜೈಲು ಶಿಕ್ಷೆ. ಕೆಲವೊಮ್ಮೆ ಎರಡನ್ನು ವಿಧಿಸಬಹುದಾಗಿದೆ. 

   ಏಪ್ರಿಲ್‌ನಲ್ಲಿ, ಸ್ಪೈಡರ್‌ಮ್ಯಾನ್ ಮತ್ತು ಸ್ಪೈಡರ್‌ವುಮನ್‌ ಬಟ್ಟೆ ಧರಿಸಿದ ದಂಪತಿ ನೈಋತ್ಯ ದೆಹಲಿಯ ದ್ವಾರಕಾದ ಬೀದಿಗಳಲ್ಲಿ ‘ಟೈಟಾನಿಕ್ ಪೋಸ್’ ಪ್ರದರ್ಶಿಸುವ ಮೂಲಕ ಬೈಕ್ ನಲ್ಲಿ ಸ್ಟಂಟ್‌ ಮಾಡಿದ್ದು ನಂತರ ಕಾನೂನು ತೊಂದರೆಗೆ ಸಿಲುಕಿದರು. ಈ ಬಗ್ಗೆ ವಿಚಾರಣೆ ನಡೆಸಲಾಗಿದ್ದು ಮೋಟಾರು ವಾಹನ (ಎಂವಿ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap