ಗುಬ್ಬಿ:
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಸಭೆ ಕರೆದ ಶಾಸಕ ಎಸ್ ಆರ್ ಶ್ರೀನಿವಾಸ್
ಗುಬ್ಬಿ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಇಂದು ನೆಡೆದ ಸಾಮಾನ್ಯ ಸಭೆಯಲ್ಲಿ ಗುಬ್ಬಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು ಹಾಗೂ ಸೋಮವಾರ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲು ಅಧಿಕಾರಿಗಳ ಸಭೆಯನ್ನು ಈ ಸಂದರ್ಭದಲ್ಲಿ ಕರೆದಿದ್ದಾರೆ,
ಈ ಸಂದರ್ಭದಲ್ಲಿ ಟ್ರೇಡ್ ಲೈಸೆನ್ಸ್ ವಿಷಯ ಚರ್ಚೆಯಾಯಿತು ಗುಬ್ಬಿ ಪಟ್ಟಣದಲ್ಲಿ ಸುಮಾರು 600 ವಿವಿಧ ವ್ಯಾಪಾರದ ಅಂಗಡಿಗಳಿದ್ದು ಇವರೆಲ್ಲಾ ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆಯಬೇಕೆಂದರು
ಅನಧಿಕೃತ ಕಟ್ಟಡಗಳಿಗೆ ಲೈಸೆನ್ಸ್ ಕೊಡುವಹಾಗಿಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು, ಇದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದು ಇದು ಕೊಡುಬಿಎಂವುದಕ್ಕೆ ಬರುವುದಿಲ್ಲವೆಂದರು
