ಬೆಳಗಾವಿ :
ಇಂದು ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ (SSLC)2ನೇ ದಿನದ ಪರೀಕ್ಷೆ ನಡೆಯಲಿದೆ . ಇಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯುತ್ತಿದ್ದು , 2 ನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ .
ಬೆಳಗಾವಿಯ ಸರ್ಕಾರಿ ಸರ್ದಾರ್ ಹೈಸ್ಕೂಲ್ ನಲ್ಲಿ ಇಂದು ಎಸ್‌ಎಸ್ ಎಲ್ ಸಿ ದ್ವಿತೀಯ ಭಾಷೆಯಯ ಪರೀಕ್ಷೆ ನಡಡೆಯುತ್ತಿದ್ದು, ಪರೀಕ್ಷೆಗೆ 8 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೇ ಪರೀಕ್ಷಾ ಕೊಠಡಿಗೆ ತೆರಳಿದ್ದಾರೆ.
ರಾಜ್ಯಾಧ್ಯಂತ ಹಿಜಾಬ್ ಸಂಘರ್ಷದ ನಡುವೆಯೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 28 ರಿಂದ ಆರಂಭವಾಗಿದ್ದು, ಇಂದು ನಿಗಧಿಪಡಿಸಿದಂತ ವೇಳಾಪಟ್ಟಿಯಂತೆ ರಾಜ್ಯದ 3,444 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ದ್ವಿತೀಯ ಭಾಷೆಯ ಪರೀಕ್ಷೆ ನಡೆಯುತ್ತಿದೆ. ಈ ವೇಳೆ ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ