SSLC:
SSLC ಪ್ರಶ್ನೆ ಪತ್ರಿಕೆ ನಿನ್ನೆ ಸಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿ ವೈರಲ್ ಆಗಿತ್ತು. ಈ ಪ್ರಕರಣದ ಹಿನ್ನಲೆಯಲ್ಲಿ ಮುದ್ದೇಬಿಹಾಳ ತಾಲೋಕಿನ ಢವಳಗಿ ಗ್ರಾಮದ ಬಿಪಿ ಪ್ರೌಡಶಾಲೆಯಲ್ಲಿ ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿದ್ದ ಹಲವ ತಲೆದಂಡವಾಗಿದ್ದು, ಕ್ರಿಮಿನಲ್ ಪ್ರಕರಣವನ್ನ ದಾಖಲಿಸಲಾಗಿದೆ.
ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ ಸಹಕರಿಸಿದ ಹಿನ್ನಲೆಯಲ್ಲಿ ರೂಢಗಿ ಗ್ರಾಮದ ಸರ್ಕಾರಿ ಎಂಎಸ್ ಎ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ್ ಕುಂದರಗಿಯನ್ನ ಪರೀಕ್ಷೆಯಿಂದ ಅಮಾನತುಗೊಳಿಸಲಾಗಿದೆ. ಅವನ ಪ್ರಶ್ನೆ ಪತ್ರಿಕೆ ಪೋಟೋ ತೆಗೆದುಕೊಮಡ ವ್ಯಕ್ತಿಯ ವಿರುದ್ಧ ಶಿಕ್ಷಣ ಕಾಯ್ದೆ 1983 ಮತ್ತು 2017 ರ ತಿದ್ದುಪಡಿ ಕಾಯ್ದೆ ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ.
ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಕೋಠಡಿಯ ಮೇಲ್ವಿಚಾರಕರಾಗಿದ್ದ ಮಡಿಕೇಶ್ವರ ಗ್ರಾಮದ ಸತ್ ಸಂಸ್ಕಾರ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕ ಬಿ ಎಸ್ ಪೋಲೇಸಿ ಅವರನ್ನ ಡಿಡಿಪಿಐ ಎನ್ ವಿ ಹೊಸೂರ ಅವರು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ