ಉಡುಪಿ :
ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಬೋಟ್ ಗೆ ಸುಮಾರು 700 ಹಾಗೂ 250 ಕೆ.ಜಿ. ತೂಕದ ಬೃಹತ್ ಗಾತ್ರ ದ ಎರಡು ಕೊಂಬಿನ ತೊರಕೆ ಮೀನುಗಳು ಸಿಕ್ಕಿಬಿದ್ದಿವೆ.
ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುಭಾಶ್ ಸಾಲಿಯಾನ್ ಅವರ ಬಲೆಗೆ ದೈತ್ಯಾಕಾರದ ಒಂದು ಮೀನು 750 ಕೆ.ಜಿ ತೂಗಿದರೆ ಮತ್ತೊಂದು 250 ಕೆ.ಜಿ ತೊರಕೆ ಮೀನುಗಳು ಸಿಕ್ಕಿಬಿದ್ದಿವೆ.
ಬೋಟ್ನಿಂದ ಮೀನುಗಳನ್ನು ಕ್ರೇನ್ ಸಹಾಯದಿಂದ ಬಂದರಿಗೆ ಇಳಿಸಲಾಯಿತು. ಈ ಮೀನಿಗೆ ಸ್ಥಳೀಯವಾಗಿ ಎರಡು ಕೊಂಬು ತೊರಕೆ ಎಂದು ಕರೆಯುತ್ತಾರೆ.
ಈ ವರ್ಷ ಸಿಕ್ಕ ದೊಡ್ಡಗಾತ್ರದ ಮೀನುಗಳನ್ನು ನೋಡಲು ಬಂದರಿಗೆ ನೂರಾರು ಮಂದಿ ಬಂದಿದ್ದರು. ಹಲವರು ಫೋಟೊ ಕ್ಲಿಕ್ಕಿಸಿಕೊಂಡು, ವಿಡಿಯೊ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ