SSLC ಪೂರಕ ಪರೀಕ್ಷೆ ಫಲಿತಾಂಶ ; ಶೇ.55.54 ಮಂದಿ ಪಾಸ್​!!

ಬೆಂಗಳೂರು : 

     2020-2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 

     ಆಳ್ವಾಸ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಬುರಗಿಯ ಗ್ರಾಮರ್ ಮಲ್ಟಿಮೀಡಿಯಾ ಶಾಲೆಯ ವಿದ್ಯಾರ್ಥಿ 625ಕ್ಕೆ 592 ಅಂಕ ಪಡೆದಿದ್ದರೆ, ಮೈಸೂರು ವಿದ್ಯಾರ್ಥಿ 591 ಅಂಕ ಪಡೆದು 3ನೇ ಸ್ಥಾನ ಪಡೆದಿದ್ದಾರೆ.

     ಈ ಬಾರಿ 17,973 ಬಾಲಕಿಯರು ಪರೀಕ್ಷೆ ಬರೆದಿದ್ದರು. ಈ ಪೈಕಿ 10,290 ಜನ ( ಶೇ 57.25) ತೇರ್ಗಡೆಯಾಗಿದ್ದಾರೆ. 35,182 ಬಾಲಕರ ಪೈಕಿ 19, 232 ಜನ (ಶೇ 54.66) ಉತ್ತೀರ್ಣರಾಗಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್  ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳು 49.86, ಪುನರಾವರ್ತಿತ ಶಾಲಾ ಅಭ್ಯರ್ಥೀಗಳು 59.42,ಖಾಸಗಿ ಅಭ್ಯರ್ಥೀಗಳು 38.31,ಪುನರಾವರ್ತಿತ ಖಾಸಗಿ ಅಭ್ಯರ್ಥೀಗಳು 54.58, ಪುನರಾವರ್ತಿತ ಅಭ್ಯರ್ಥೀಗಳು  65.00ಪುನರಾವರ್ತಿತ ಖಾಸಗಿ ಅಭ್ಯರ್ಥೀಗಳು 51.63, ಒಟ್ಟು 55.54

ಲಿಂಗವಾರು ಫಲಿತಾಂಶ:

ಗಂಡು- 54.66,  ಹೆಣ್ಣು- 57.25.

ಶಾಲಾವರು ಫಲಿತಾಂಶ:

ಸರ್ಕಾರಿ -58.0

ಅನುದಾನಿತ- 54.08

ಅನುದಾನರಹಿತ 50.7

ಒಟ್ಟು 55.54

ನಗರ ಮತ್ತು ಗ್ರಾಮೀಣವಾರು ಫಲಿತಾಂಶ:

ನಗರ – 48.2

ಗ್ರಾಮೀಣ -61.04

ಮಾಧ್ಯಮವಾರು ಫಲಿತಾಂಶ:

ಕನ್ನಡ -58.01

ಆಂಗ್ಲ- 41.44

ಉರ್ದು- 52.00

ಮರಾಠಿ -52.00

ತೆಲುಗು- 23.81

ತಮಿಳು -33.33

ಹಿಂದಿ -54.55

ಒಟ್ಟು- 55.54

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap