ಚೆನ್ನೈ:
ಕರ್ನಾಟಕದಲ್ಲಿ ಜಾರಿಯಲ್ಲಿರುವಂತೆಯೇ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆ ಒದಗಿಸುವ ಯೋಜನೆ ನೆರೆಯ ತಮಿಳುನಾಡಿನಲ್ಲಿಯೂ ಚಾಲನೆಗೊಂಡಿದೆ. ದ್ರಾವಿಡ ಐಕಾನ್ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹಿಳೆಯರಿಗೆ ಮಾಸಿಕ 1,000 ರೂ. ಆರ್ಥಿಕ ನೆರವು ಒದಗಿಸುವ ಯೋಜನೆಗೆ ಚಾಲನೆ ನೀಡಿದರು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ, ಹಲವಾರು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್ ಕಾರ್ಡ್ ಗಳನ್ನು ಸ್ಟಾಲಿನ್ ವಿತರಿಸಿದರು. ರಾಜ್ಯ ಸಚಿವರು ತಮ್ಮ ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.ಮಹಿಳೆಯರ ಮೂಲ ಆದಾಯದ ಕಾರ್ಯಕ್ರಮವಾಗಿರುವ ಇದಕ್ಕೆ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಹೆಸರನ್ನು ಇಡಲಾಗಿದೆ. ಇದು ಮಹಿಳೆಯರ ಹಕ್ಕು ಎಂದು ರಾಜ್ಯ ಸರ್ಕಾರ ಹೇಳಿದೆ.
ಯೋಜನೆ ಅಡಿಯಲ್ಲಿ 1.06 ಕೋಟಿ ಮಹಿಳೆಯರನ್ನು (1,06,50,000) ಫಲಾನುಭವಿಗಳೆಂದು ಸರ್ಕಾರ ಗುರುತಿಸಿದೆ ಮತ್ತು 1,000 ರೂ ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ