ಹೊಸ ಪಾಡ್ಕಾಸ್ಟ್‌ ಸರಣಿಗೆ ನಾಂದಿ ಹಾಡಿದ ಸ್ಟಾಲಿನ್‌ ….!

ತಮಿಳುನಾಡು

      ‘ಸ್ಪೀಕಿಂಗ್ ಫಾರ್ ಇಂಡಿಯಾ’ ಶೀರ್ಷಿಕೆಯಡಿ ಪಾಡ್ಕಾಸ್ಟ್‌ ಸರಣಿಯನ್ನು ಎಂಕೆ ಸ್ಟಾಲಿನ್‌  ಘೋಷಿಸಿದ್ದಾರೆ. ಈ ಕುರಿತಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

     ಬಿಜೆಪಿ ಮತ್ತು ಅದರ ಆಡಳಿತ ದೇಶವನ್ನು ಹೇಗೆ ನಾಶ ಮಾಡಿತು ಎನ್ನುವ ಬಗ್ಗೆ ಜನರಿಗೆ ತಿಳಿಸಿದ್ದಾರೆ. ಹಾಗಾದರೆ ‘ಸ್ಪೀಕಿಂಗ್ ಫಾರ್ ಇಂಡಿಯಾ’ ಮೊದಲನೆಯ ಸರಣಿಯಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ? ಬಿಜೆಪಿ ವಿರುದ್ಧ ಸಾರಿದ ಸಮಯದಲ್ಲಿ ಡಿಎಂಕೆ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಿದೆ ಎನ್ನುವ ಬಗ್ಗೆ ತಿಳಿಯೋಣ. ‘ಸ್ಪೀಕಿಂಗ್ ಫಾರ್ ಇಂಡಿಯಾ’ ಸರಣಿ ಹೀಗಿದೆ:- ”ಎಲ್ಲರೂ ಮಾತಾಡಲೇಬೇಕಾದ ಸಮಯದಲ್ಲಿ ನಾವಿದಿವಿ. ಕಾಲಕಾಲದ ಸಮಯದಿಂದಲೂ ಇಂಡಿಯಾದ ಜನರೆಲ್ಲರೂ ಕಾಪಾಡಿಕೊಂಡು ಬಂದಿರುವ ಅನೇಕತೆಯಲ್ಲಿ ಏಕತೆ ಎಂಬ ತತ್ವವನ್ನು ಒಡೆಯಲು, ಇಂಡಿಯಾದ ಅಡಿಪಾಯವನ್ನು ಅಲ್ಲಾಡಿಸಲು ಭಾರತದ ಜನತಾ ಪಕ್ಷ್ ಪ್ರಯತ್ನಿಸುತ್ತಿದೆ.

     2014ರಲ್ಲಿ ಅಧಿಕಾರಕ್ಕೆ ಬಂದಂತಹ ಭಾರತೀಯ ಜನತಾ ಪಕ್ಷ ತಮ್ಮ ಸೇವೆಗೆ ಬರುವ ಮೊದಲು ಜನರಿಗೆ ಕೊಟ್ಟಂತ ಯಾವ ಮಾತುಗಳನ್ನೂ ನೆರವೇರಿಸಿಲ್ಲ. ಹೊರ ದೇಶದಿಂದ ಕಪ್ಪು ಹಣವನ್ನು ತೆಗೆದುಕೊಂಡು ಬಂದು ಒಬ್ಬರಿಗೆ 15ಲಕ್ಷ ಕೊಡುತ್ತೇವೆ ಅಂತ ವರ್ಷಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗವಕಾಶ, ರೈತರ ಆದಾಯವನ್ನು ಎರಡಷ್ಟು ಮಾಡುತ್ತೇವೆ ಎಂದು, ಸ್ವಂತ ಮನೆ ಇರದವರು ಯಾರೂ ಇರೋದಿಲ್ಲ, ಇಂಡಿಯಾ ಐದು ಟ್ರಿಲಿಯನ್ ಡಾಲರ್ ನಾಡಾಗುವುದು ಎಂದು ಹೀಗೆಲ್ಲಾ ಬಾಯಿಯಿಂದ ಕಥೆ ಹೇಳಿದರು. ಎಲ್ಲಿದೆ ಗುಜರಾತ್ ಮಾಡೆಲ್? ಹತ್ತು ವರ್ಷ ಪೂರ್ಣಗೊಳ್ಳುತ್ತಿದೆ.

    ಆದರೆ ಯಾವುದೇ ಮಾತನ್ನು ಪೂರೈಸಿಲ್ಲ. ಗುಜರಾತ್ ಮಾಡೆಲ್ ಅಂತ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಮಾಡೆಲ್ ಯಾವ ಮಾಡೆಲ್ ಅಂತ ತಿಳಿಯದೇ ಮುಗಿಯುತ್ತಿದೆ. ದ್ರಾವಿಡ ಮಾಡೆಲ್ ತಮಿಳುನಾಡಿನಲ್ಲಿ ಯಾವೆಲ್ಲ ಸಾಧನೆ ಮಾಡಿದೆ ಎಂದು ನಾವು ವಿವರವಾಗಿ ಹೇಳಿದಾಗ ಅವರು ಹೆಮ್ಮೆಯಿಂದ ಮಾತನಾಡುತ್ತಿದ್ದ ಗುಜರಾತ್ ಮಾಡೆಲ್ ಬಗ್ಗೆ ಈಗ ಮರೆತು ಸಹ ಮಾತನಾಡುವುದಿಲ್ಲ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಚೆನ್ನಾಗಿದ್ದ ಸಾರ್ವಜನಿಕ ಕಟ್ಟಡಗಳನ್ನ ಹದಗೆಡಿಸಿ ಇಟ್ಟಿದ್ದಾರೆ. ಮತ್ತದರ ಹತ್ತಿರದ ಉದ್ಯಮಿಗಳಿಗೆ ಅದನ್ನು ವರ್ಗಾಯಿಸುವುದಕ್ಕಷ್ಟೇ ಪ್ರಯತ್ನ ಮಾಡುತ್ತಿದ್ದಾರೆ.

   ಇಟ್ಟಿನಲ್ಲಿ ಇಂಡಿಯಾದಲ್ಲಿ ಅವರಲ್ಲಿ ಕೆಲವರ ಕಥೆ ಮುಗಿದು ಹೋಗಿದೆ. ಸರ್ಕಾರದ ಸೌಮ್ಯದಲ್ಲಿ ಇದ್ದ ಏರ್‌ ಇಂಡಿಯಾ ಕಂಪನಿ, ಈಗ ಖಾಸಗಿ ಕಂಪನಿಯ ಪಾಲಾಗಿದೆ. ಭಾರತಾದ್ಯಂತ ಇದ್ದ್ ವಿಮಾನ ನಿಲ್ದಾಣಗಳು, ಬಂದರುಗಳು ಖಾಸಗಿಯ ಪಾಲಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ನಮ್ಮ ರೈತರ ಆದಾಯ ಕೂಡ ದ್ವಿಗುಣವಾಗುತ್ತಿಲ್ಲ. ಜೊತೆಗೆ ಜೀವನದ ಗುಣಮಟ್ಟವೂ ಸಹ ಹೆಚ್ಚಾಗಿಲ್ಲ. ಇದನ್ನೆಲ್ಲಾ ಮರೆಮಾಚಲು ಧಾರ್ಮಿಕತೆಯನ್ನು ಕೈಗೆ ತೆಗೆದುಕೊಂಡಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಪಕ್ಷ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ತಣ್ಣಗಾಗಲು ಪ್ರಯತ್ನಿಸುತ್ತಿದ್ದಾರೆ.

   2002ರಲ್ಲಿ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಬಿತ್ತಿದ ಬೀಜ, ಹಿಂಸಾತ್ಮಕ ದ್ವೇಷ, 2023ರಲ್ಲಿ ಈಶಾನ್ಯ ರಾಜ್ಯವಾದ ಮಣಿಪುರವೂ ಹೊತ್ತಿ ಉರಿಯುತ್ತಿದೆ. ಹರಿಯಾಣದಲ್ಲಿ ಅನಾವರಣಗೊಂಡಿರುವ ಮತಿಯ ವಾದ ಈಗ ಅಮಾಯಕರ ಜೀವ ಮತ್ತು ಆಸ್ತಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದನ್ನು ಈಗ ಕೊನೆ ಮಾಡದೇ ಹೋದರೆ ಇಂಡಿಯಾವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ. ಇಂಡಿಯಾದ ವೈವಿದ್ಯತೆಗೆ, ಫೆಡರಲಿಸಂಗೆ, ಪ್ರಜಾಪ್ರಭುತ್ವದ ಘನತೆಗೆ ಯಾವಾಗ ಅಪಾಯ ಬಂದಿತ್ತೋ ಅವಾಗೆಲ್ಲಾ ಮುಂಚೂಣಿಯಲ್ಲಿ ಡಿಎಂಕೆ ನಿಂತಿದೆ. ‘

   ಪೇರರಿಗ್ನರ್ ಅಣ್ಣ ಮಾಣಿವೆಂಕಟವೇಲ್ ಹೇಳಿದ್ದಾರೆ. ಆಂದೋಲವು ತಮಿಳುನಾಡಿನಲ್ಲಿ ನಿಂತು ಇಂಡಿಯಾಕ್ಕಾಗಿ ಮಾತನಾಡುವ ಪಕ್ಷ ಆಗದೆ ನಾವು ಒಂದೇ ಅಂತ ಹೇಳಿದ್ದಲ್ಲದೇ ಆಡಳಿತ ಬದಲಾವಣೆಗಳನ್ನು ಸೃಷ್ಟಿಸಿ ತೋರಿಸಿ ತೋರಿಸಿದ್ದಾರೆ ನಮ್ಮ ತಮಿಳುನಾಯಕ ಕಾಳೈಗ್ನರ್ (Kalaignar). ಪ್ರಧಾನಮಂತ್ರಿಗಳನ್ನು ಮತ್ತು ರಾಷ್ಟ್ರಪತಿಗಳನ್ನು ಸೃಷ್ಟಿಸಿದ್ದು ನಮ್ಮ ಡಿಎಂಕೆ ಪಕ್ಷ. ಈಗ ಮತ್ತೊಮ್ಮೆ ಹಿಂದಿನ ಕರ್ತವ್ಯಕ್ಕೆ ನಮ್ಮ ಪಕ್ಷ ಬರುತ್ತಿದೆ. 2024ರ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದಕ್ಕಿಂತ ಯಾರು ಅಧಿಕಾರಕ್ಕೆ ಬರಬಾರದು ಎಂದು ತೀರ್ಮಾನ ಮಾಡುವ ಘಟ್ಟವಾಗಿದೆ.

   9 ವರ್ಷಗಳ ಬಿಜೆಪಿ ಆಡಳಿತದಲ್ಲಿ ರಾಜ್ಯಗಳನ್ನು ನಾಶ ಮಾಡಲು ಎಷ್ಟೋ ಹಗರಣಗಳನ್ನು ಮಾಡಲಾಗಿದೆ. ಜಿಎಸ್‌ಟಿಯಿಂದಾದ ನಷ್ಟ ರಾಜ್ಯದಲ್ಲಿನ ಹಣಕಾಸಿನ ಹಕ್ಕನ್ನು ಸಂಪೂರ್ಣವಾಗಿ ಕಿತ್ತುಕೊಂಡಿದ್ದು ಜಿಎಸ್‌ಟಿ. ಹಾಗಾಗಿ ತಮಿಳುನಾಡಿಗೆ ಆರ್ಥಿಕ ಸ್ವಾಯತ್ತತೆಯನ್ನು ಕಳೆದುಕೊಂಡಿದೆ. ಜಿಎಸ್‌ಟಿಯನ್ನು ಕಿತ್ತು ಹಾಕಲು ರಾಜ್ಯಗಳು ಅದೆಷ್ಟೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಹಿಂಪಡೆಯಲಿಲ್ಲ. ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸಾಕಷ್ಟು ಹಣವನ್ನು ತೆರಿಗೆ ಮೂಲಕ ಕೊಡುತ್ತಿದೆ.

  ಅದೇ ಸಮಯದಲ್ಲಿ ತಮಿಳುನಾಡು ಕೇಂದ್ರ ಸರ್ಕಾರಕ್ಕೆ ತೆರಿಗೆ ಆದಾಯದಲ್ಲಿ ಪಾವತಿಸಿದ ಪ್ರತೀ ರೂಪಾಯಿಗೆ ಕೇವಲ 29ಪೈಸೆ ಮಾತ್ರ ಹಿಂತಿರುಗುತ್ತಿದೆ. 2014ರಿಂದ ಕಳೆದ ವರ್ಷದವರೆಗೆ (2022)ನಮ್ಮ ರಾಜ್ಯ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ತೆರಿಗೆ ಹಣ 5,16,000ಕೋಟಿ ರೂಪಾಯಿ. ಆದರೆ ತೆರಿಗೆ ವಿತರಣೆಯಿಂದ ನಮಗೆ ಮರಳಿ ಸಿಕ್ಕಿದ್ದು ಎಷ್ಟೆಂದರೆ ಕೇವಲ 2,8000 ಕೋಟಿ ರೂಪಾಯಿ ಮಾತ್ರ. ಸಂಪೂರ್ಣ ತೆರಿಗೆ ವಿತರಣೆ ಮಾಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ತಮ್ಮ ರಾಜ್ಯಗಳಿಗೆ ಮಾತ್ರ ಹೇಗೆ ವಾಪಸ್ ಕೊಡಲು ಸಾಧ್ಯ. ಬಿಜೆಪಿ ಆಡಳಿತವಿರುವ ಒಂದು ರಾಜ್ಯ 2,4000ಕೋಟಿ ರೂಪಾಯಿ ತೆರಿಗೆ ನೀಡಿದೆ.

   ಆದರೆ ಹಿಂದಿರುಗಿಸಿರುವ ಒಟ್ಟು ಆದಾಯ 9,4000ಕೋಟಿ ರೂಪಾಯಿ. ಇದನ್ನೇ ನಾವು ತುಂಬಾ ದಿನಗಳಿಂದ ಹೇಳುತ್ತಿರುವುದು. ಇದೇ ರೀತಿ ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಡಳಿತ ಬಿಜೆಪಿ ಪಕ್ಷವಿದೆ. ಹೀಗೆ ಲೆಕ್ಕಾಚಾರ ಮಾಡ್ತಾ ಹೋದರೆ ತಮಿಳುನಾಡು ತನ್ನ ಆರ್ಥಿಕ ನಿಧಿಯನ್ನು ಕಳೆದುಕೊಳ್ಳುತ್ತಾ ಬಂದಿದೆ. 12ನೇ ಹಣಕಾಸು ಸಮಿತಿಯಲ್ಲಿ 5.305% ರಷ್ಟು ಹಂಚಿಕೆ ಇದೆ. ಕೇಂದ್ರ ಸರ್ಕಾರದ ಬಿಜೆಪಿಯೂ 15ನೇ ಹಣಕಾಸು ಸಮಿತಿಯಲ್ಲಿ 4.079ರಷ್ಟು ಇಳಿಕೆಯಾಗಿದೆ. ಹೀಗಾಗಿ ಪ್ರತೀ ವರ್ಷ ತಮಿಳುನಾಡಿಗೆ ಆಗುತ್ತಿರುವ ನಷ್ಟ ಅಷ್ಟಿಷ್ಟಲ್ಲ.

   ನಮಗೆ ನ್ಯಾಯವಾಗಿ ಸಿಗಬೇಕಾದ ಸಾವಿರಾರು ಕೋಟಿ (72,311ಕೋಟಿ) ಹಣವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅನೇಕ ಯೋಜನೆಗಳಿಗೆ ಪಾಲು ಅನೇಕ ಯೋಜನೆಗಳಿಗೆ ಪಾಲನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಅದರಿಂದ ಬರುವ ಹೆಸರು ಮಾತ್ರ ಕೇಂದ್ರ ಸರ್ಕಾರಕ್ಕೆ ಸೇರಬೇಕು ಅಂತಿದಾರೆ. ತಮಿಳುನಾಡು ಸರ್ಕಾರಕ್ಕೆ ಒಂದು ಯೋಜನೆಯನ್ನು ಈ ಒಂಬತ್ತು ವರ್ಷದಲ್ಲಿ ಕೊಟ್ಟಿಲ್ಲ. ಜನರ ವಿರುದ್ಧವನ್ನು ಕಟ್ಟಿಕೊಂಡಿರುವ ರಾಜ್ಯ ಕೇಂದ್ರ ಬಿಜೆಪಿ ಸರ್ಕಾರ. ಜನರಿಗೆ ನೇರವಾಗಿ ಅನುಕೂಲ ಮಾಡುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಗಳನ್ನು ನಾಶ ಮಾಡುವ ಗುರಿಯನ್ನು ಇವರು ಹೊಂದಿದ್ದಾರೆ. ಇದರ ಮೂಲಕ ಸಂಪೂರ್ಣ ಭಾರತವನ್ನು ಒಡೆಯಲು ಪ್ರಯತ್ನಿಸಿದ್ದಾರೆ. 

    ಇವೆಲ್ಲಾ ಇಂಡಿಯಾದ ಬುನಾದಿ. ನಿಜವಾದ ಇಂಡಿಯಾವನ್ನ, ಒಗ್ಗಟ್ಟಿನ ಇಂಡಿಯಾವನ್ನ, ಇಂತಹ ಇಂಡಿಯಾವನ್ನು ನಾವು ಮರು ಸ್ಥಾಪಿಸಲು ನಾವು I.N.D.I.A ಅಂದರೆ ವಿಪಕ್ಷಗಳ ಮೈತ್ರಿಕೂಟವನ್ನು ರಚಿಸಿದ್ದೇವೆ. ಇಂಡಿಯಾವನ್ನು ಕಾಪಾಡುವುದು ಈ ಇಂಡಿಯಾದ ಪ್ರಯತ್ನ. ಬಿಜೆಪಿಗೆ ಬೆಲೆ ಕೊಡದಂತದಹ ಬೇರೆ ಪಕ್ಷಗಳಿಗೆ ಮಣಿಪುರದಂತೆ ಬಲಿಯಾಗದೆ, ಸೋಲನ್ನು ಕಾಣದೆ, ಇಡೀ ಇಂಡಿಯಾವೂ ಬಲಿಯಾಗದಂತೆ ತಡೆಯಬೇಕು ಅಂದರೆ ಇಂಡಿಯಾದ ಕೂಟ ಅಧಿಕಾರಕ್ಕೆ ಬರಬೇಕು.

   ಇದಕ್ಕಾಗಿ ಆರಂಭಿಕ ಹಂತದ ಸಭೆಗಳನ್ನು ಬೆಂಗಳೂರಿನಲ್ಲಿ, ಮುಂಬೈನಲ್ಲಿ ನಡೆಸಲಾಗಿದೆ. ಇಂಡಿಯಾವನ್ನು ಉಳಿಸೋಣ, ಸಂಪೂರ್ಣ ಇಂಡಿಯಾವನ್ನು ಕಟ್ಟೋಣ, ಇಂಡಿಯಾವನ್ನು ಕಾಪಾಡೋಣ. ಅದಕ್ಕಾಗಿ ಮೊದಲು ಇಂಡಿಯಾಗಾಗಿ ಮಾತನಾಡೋಣ. ಈಗ ಇದು ಎಂಕೆ ಸ್ಟಾಲಿನ್ ಅವರ ಧ್ವನಿಯಾಗದೇ ಇಂಡಿಯಾದ ಧ್ವನಿಯಾಗುತ್ತದೆ. ನನ್ನ ಧ್ವನಿಯನ್ನು ಇಂಡಿಯಾದ ಧ್ವನಿಯಾಗಿ ಎಲ್ಲ ಕಡೆಗಳಲ್ಲಿ ಕೊಂಡೊಯ್ಯಿರಿ. ಇಂಡಿಯಾಗೆ ಜೈಯವಾಗಲಿ.

 

Recent Articles

spot_img

Related Stories

Share via
Copy link
Powered by Social Snap