ತಕ್ಷಣವೇ ಜನಗಣತಿ ಪ್ರಾರಂಭಿಸಬೇಕು : ನಿತೀಶ್ ಕುಮಾರ್

ಪಾಟ್ನಾ: 

    ದೇಶದಲ್ಲಿ ತಕ್ಷಣವೇ ಜನಗಣತಿ ಪ್ರಾರಂಭಿಸಬೇಕು ಮತ್ತು ಈ ಪ್ರಕ್ರಿಯೆ ಪ್ರಾರಂಭಿಸಲು ಯಾವುದೇ ವಿಳಂಬ ಮಾಡಬಾರದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

     2024 ರ ಲೋಕಸಭಾ ಚುನಾವಣೆಯ ನಂತರ ಜನಗಣತಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ ಒಂದು ದಿನದ ನಂತರ ಅವರು ಬಿಹಾರ ಸಿಎಂ ಈ ಹೇಳಿಕೆ ನೀಡಿದ್ದಾರೆ.

    “ದೇಶದಲ್ಲಿ ಜನಗಣತಿ 2021 ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಮೊದಲ ಬಾರಿಗೆ ವಿಳಂಬವಾಗಿದೆ. ಈಗ ಮತ್ತಷ್ಟು ವಿಳಂಬವಾಗಬಾರದು. 2024ರ ವರೆಗೆ ಏಕೆ ಕಾಯಬೇಕು? ಕೂಡಲೇ ಆರಂಭಿಸಬೇಕು’ ಎಂದಿದ್ದಾರೆ.

    2024ರ ಲೋಕಸಭಾ ಚುನಾವಣೆಯ ನಂತರ ಜನಗಣತಿ ಆರಂಭವಾಗಲಿದೆ ಎಂದು ಅಮಿತ್ ಶಾ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. ಆದರೆ ಇನ್ನೂ ತಡ ಮಾಡದೆ ಗಣತಿ ಕಾರ್ಯವನ್ನು ಆರಂಭಿಸಬೇಕು ಎಂದು ನಿತೀಶ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap