ಬೆಂಗಳೂರು:
ಸ್ಯಾಂಡಲ್ ವುಡ್ ಮಾದಕ ಜಾಲದ ಪ್ರಕರಣದಲ್ಲಿ ಬಂಧಿತ ನಟಿ ಸಂಜನಾ ಗಲ್ರಾನಿ, ಬಡ್ಡಿ ದಂಧೆಯಲ್ಲಿ ತೊಡಗಿದ್ದರಂತೆ.
ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಂಜನಾ, ಫ್ಯ್ಲಾಟ್ ಮೇಲೆ ದಾಳಿ ಮಾಡಿದಾಗ, ಅವರ ಮನೆಯಲ್ಲಿ ಹಲವು ಚೆಕ್ ಗಳು ದೊರಕಿದ್ದವು. ಹೀಗಾಗಿ ಚೆಕ್ ಗಳ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಂಜನಾಗೆ ಪ್ರಶ್ನಿಸಿದಾಗ, ತಾನು ಬಡ್ಡಿ ವ್ಯವಹಾರ ಮಾಡುತ್ತಿದ್ದುದ್ದಾಗಿ ಅವರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ಉದ್ಯಮಿಗಳಿಗೆ ಸಾಲ ನೀಡಿದ್ದಾಗಿ ಸಂಜನಾ ತಿಳಿಸಿದ್ದು, ಈವರೆಗೆ 20ಕ್ಕೂ ಅಧಿಕ ಜನರಿಗೆ ಕೋಟಿಗಟ್ಟಲೇ ಸಾಲ ನೀಡಿದ್ದರು ಎನ್ನಲಾಗಿದೆ.
ಪ್ರತಿಷ್ಠಿತ ಮಾಲ್ ಅಂಗಡಿ ಮಾಲೀಕರಿಗೆ ಸಾಲ ನೀಡಿ, ಅವರಿಂದ ಬಡ್ಡಿ ವಸೂಲಿ ಮಾಡುವುದಕ್ಕೆ ನಾಲ್ಕು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಸಂಜನಾ, ಒಂದು ವೇಳೆ ಮಾಲ್ ಮಾಲೀಕರು ಹಣ ನೀಡದಿದ್ದರೇ, ಅವರ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯುವ ಕೆಲಸವನ್ನು ಈ ನಾಲ್ಕು ಜನ ಮಾಡುತ್ತಿದ್ದರಂತೆ.
ಸದ್ಯ ಕಾಟನ್ ಪೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ