ರಾಜ್ಯ ಬಜೆಟ್: ಜಿಲ್ಲೆಯ ಜನಪತ್ರಿನಿಧಿಗಳು, ಸಂಘ ಸಂಸ್ಥೆಯವರಿಂದ ಮಿಶ್ರಪ್ರತಿಕ್ರಿಯೆ

ತುಮಕೂರು:

ಸ್ವಾತಕೋತ್ತರ ವೈದ್ಯಕೀಯ ಕೋರ್ಸ್ ಆರಂಭ ಸ್ವಾಗತಾರ್ಹ


ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳನ್ನು ಪ್ರಾರಂಭಿಸಲು ಈ ಬಜೆಟ್‍ನಲ್ಲಿ ಅನುದಾನ ಕಲ್ಪಿಸಿರುವುದಕ್ಕೆ ಸಿಎಂಗೆ ಅಭಿನಂದಿಸುವೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭ ಮಾಡುವುದರಿಂದ ಸಾರ್ವಜನಿಕರಿಗೆ ನುರಿತ ವೈದ್ಯರ ವೈದ್ಯಕೀಯ ಸೇವೆ ಸಿಗಲಿದೆ. ಇದಕ್ಕೆ ಸಹಕರಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ ರವರಿಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ರವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುವೆ.

-ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ.

ಟ್ರೋಮಾ ಸೆಂಟರ್ ಹಳೆ ಬಜೆಟ್ ಘೋಷಣೆ

ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಮೂಗಿಗೆ ತುಪ್ಪ ಸವರಿದಂತಿದೆ. ಡಾ.ಶ್ರೀ. ಶಿವಕುಮಾರ ಸ್ವಾಮಿ ಸ್ಮøತಿವನ ನಿರ್ಮಾಣ ಘೋಷಣೆ ಸ್ವಾಗತಾರ್ಹ. ಪ್ರತಿಯೊಂದು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಗೆ ಅಬ್ದುಲ್ ಕಲಾಂ ಹೆಸರಿಡುವುದಾಗಿ ಘೋಷಿಸಿದ್ದು, ತುಮಕೂರು ನಗರದಲ್ಲಿ ಒಂದು ಶಾಲೆಗೆ ಇಡಬೇಕು.

ಇದನ್ನು ಹೊರತುಪಡಿಸಿ ತುಮಕೂರುಜಿಲ್ಲೆಗೆಯಾವುದೇಕೊಡುಗೆ ನೀಡದೆ ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಮಾಜಿ ಶಾಸಕರು ವಿಷಾಧಿಸಿದ್ದಾರೆ.ತುಮಕೂರಿನಲ್ಲಿ ಈ ಹಿಂದೆಟ್ರಾಮಾ ಸೆಂಟರ್‍ಘೋಷಣೆಯಾಗಿದ್ದು, ಈಟ್ರಾಮಾ ಸೆಂಟರ್‍ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿದೆ .

ಆದರೆ ಈ ಬಜೆಟ್ ನಲ್ಲಿ20ಕೋಟಿಟ್ರಾಮಾ ಸೆಂಟರ್ ಗೆ ಬಿಡುಗಡೆಯಾಗಿದ್ದುಗೊಂದಲ ಸೃಷ್ಟಿಮಾಡಿದೆ. ತುಮಕೂರುಜಿ ಲ್ಲಾಸ್ಪತ್ರೆಯಲ್ಲಿ ಪಿ.ಜಿ ಸೆಂಟರ್‍ಘೋಷಣೆಯಾಗಿದೆ, ಇದರ ಬದಲಿಗೆತುಮಕೂರು ನಗರಕ್ಕೆ ಸೂಪರ್ ಸ್ಪೆಷಾಲಿಟಿಆಸ್ಪತ್ರೆಘೋಷಣೆ ಮಾಡಿದ್ದರೆ ಅನುಕೂಲವಾಗುತ್ತಿತ್ತು.

-ಡಾ.ರಫೀಕ್ ಅಹಮದ್, ಮಾಜಿ ಶಾಸಕರು.

ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ
ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಚೊಚ್ಚಲ ಬಜೆಟ್‍ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಬಡವರ್ಗದವರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದ್ದಾರೆ.

ರಾಜ್ಯದ ಮಹಿಳೆಯರಿಗಾಗಿ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ, ಬಡವರ್ಗದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಸೌಲಭ್ಯ ನೀಡಿರುವುದು ಒಳ್ಳೆಯ ಬೆಳವಣಿಗೆ.

ಕ್ಯಾನ್ಸರ್ ಹಾಗೂ ಹೃದ್ರೋಗ ಸಮಸ್ಯೆಗಳಿಗೆ ಹೆಚ್ಚಿನ ಗಮನ ಹರಿಸಿರುವ ಸಿಎಂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕೀಮೋಥೆರಪಿ ಹಾಗೂ ತಾಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪಿಜಿ ಅಡ್ಮಿಷನ್ ಪ್ರಾರಂಭಕ್ಕೆ ಅನುಮತಿ ನೀಡಿರುವುದು ವೈದ್ಯವಿದ್ಯಾರ್ಥಿಗಳಿಗೆ ಅನುಕೂಲ. ಜೊತೆಗೆ ಟ್ರೋಮಾ ಕೇರ್ ಸೆಂಟರ್‍ಗೆ 20 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ.

-ಡಾ.ಎಸ್.ಪರಮೇಶ್, ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ತೆರಿಗೆ ಹೆಚ್ಚಳವಿಲ್ಲದ ಸರ್ವರ ಅಭಿವೃದ್ಧಿ ಬಜೆಟ್

ಯಾವುದೇ ತೆರಿಗೆ ಹೆಚ್ಚಳವಿಲ್ಲದೆ ಸರ್ವರ ಅಭಿವೃದ್ಧಿಗಾಗಿ ಮಂಡಿಸಿದ ಬಜೆಟ್ ಇದಾಗಿದೆ. ಈ ಬಜೆಟ್‍ನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣಕ್ಕೆ ಹಣವನ್ನು ಮೀಸಲಿಟ್ಟಿದ್ದು ಶಿಕ್ಷಣದ ಅಭಿವೃದ್ಧಿಗೆ ಸಾಕಾರವಾಗಲಿದೆ.

50 ಕನಕದಾಸ ವಿದ್ಯಾರ್ಥಿ ನಿಲಯಕ್ಕೆ 165 ಕೋಟಿ, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ 500 ಕೋಟಿ, ಪ್ರೌಡಶಾಲೆ ಮತ್ತು ಪಿಯು ಕಾಲೇಜುಗಳ ಪೀಠೋಪಕರಣಕ್ಕೆ 100 ಕೋಟಿ, ರಾಜ್ಯದಲ್ಲಿ ಏಳು ವಿನೂತನ ಮಾದರಿಯ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಯೋಜನೆ ಮಹತ್ವದ್ದು.

-ಟಿ.ಎಸ್.ಸುನೀಲ್‍ಪ್ರಸಾದ್ ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ.

ಯುವಜನರಿಗೆ ಪ್ರತ್ಯೇಕ ಬಜೆಟ್ ಬೇಡಿಕೆಯಾಗಿಯೇ ಉಳಿದಿದೆ

ಯುವಜನರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬುದು ರಾಜ್ಯದ ಯುವಜನ ಕಾರ್ಯಕರ್ತರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದು ಆಶಯವಾಗಿಯೇ ಉಳಿದಿದೆ.

ಎಲ್ಲಾ ಬಜೆಟ್‍ಗಳಲ್ಲೂ ಯುವಜನರ ಸಬಲೀಕರಣಕ್ಕಿಂತ ಕ್ರೀಡೆಗೆ ಹೆಚ್ಚು ಒತ್ತು ಕೊಡಲಾಗಿದೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ “ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು”ಗಳನ್ನು ರಚಿಸಿ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿ ಹುಣಸೆ ಅಭಿವೃದ್ಧಿ ಮಂಡಳಿಯ ಸ್ಥಾಪನೆ, ಸಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳಿಗೆ ಆದ್ಯತೆ ಸಿಕ್ಕಿಲ್ಲ. ಈ ಭಾಗದ ಜನಪ್ರತಿನಿಧಿಗಳು ಬಜೆಟ್ ಚರ್ಚೆಯಲ್ಲಿ ಈ ಸಂಗತಿಗಳನ್ನು ಸರ್ಕಾರದ ಗಮನಕ್ಕೆ ತರಬೇಕು.

-ತಿಪ್ಪೇಸ್ವಾಮಿ ಕೆ.ಟಿ., ಯುವಜನ ಕಾರ್ಯಕರ್ತರು.

ಸರ್ವ ವಲಯಕ್ಕೆ ಆದ್ಯತೆ, ಮೆಟ್ರೋ ಈಡೇರಿಲ್ಲ

ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರಗಳನ್ನು ಪರಿಗಣಿಸಿ ರಾಜ್ಯದ ಕೃಷಿ, ಕೈಗಾರಿಕೆ, ಹಾಗೂ ಸೇವಾ ವಲಯಗಳಿಗೂ ಆದ್ಯತೆ ನೀಡಿದ್ದಾರೆ. ಜೊತೆಗೆ ಮಹಿಳೆಯರ ಸಬಲೀಕರಣ, ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ತುಮಕೂರಿಗೆ ನಮ್ಮ ಮೆಟ್ರೋ ಯೋಜನೆಯನ್ನು ನಿರಿಕ್ಷಿಸಿದ್ದೇವು ಅದು ಹುಸಿಯಾಗಿರುವುದು ಬೇಸರದ ಸಂಗತಿ.

-ಎಂ.ಎನ್.ಲೋಕೇಶ್‍ಅಧ್ಯಕ್ಷರು, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ.

ಮಿನಿ ಆಹಾರ ಪಾರ್ಕ್ ಸ್ಥಾಪನೆ ಒಳ್ಳೆ ಬೆಳವಣಿಗೆ

ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಉತ್ತೇಜಿಸಲು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮಿನಿ ಆಹಾರ ಪಾರ್ಕ್ ಮಾಡಿರುವುದು ರೈತ ಸಮುದಾಯಕ್ಕೆ , ವರ್ತಕ ಸಮುದಾಯಕ್ಕೆ, ಹರ್ಷದಾಯಕ ಸಂಗತಿ.

ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ರೂ.500ಕೋಟಿ ವೆಚ್ಚದ ರೈತ ಶಕ್ತಿ ಯೋಜನೆ ಅನುಷ್ಠಾನಗೊಳಿಸಿರುವುದು ಸಂತೋಷದ ವಿಷಯ ತುಮಕೂರು ಜಿಲ್ಲೆಯನ್ನು ವಿಶೇಷ ಹೂಡಿಕೆ ಪ್ರದೇಶ ಎಂದು ಘೋಷಿಸಿರುವುದು ಸ್ವಾಗತಾರ್ಹ.

-ಟಿ.ಟಿ.ಸತ್ಯನಾರಾಯಣ ಕಾರ್ಯದರ್ಶಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ.

ಹೂಡಿಕೆದಾರರ ಸಮಾವೇಶ ತುಮಕೂರಿಗೆ ಕೈ ತಪ್ಪಿದೆ
2022-23ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟ ತುಮಕೂರು ರಾಯದುರ್ಗ ಹಾಗೂ ತುಮಕೂರು ದಾವಣಗೆರೆ ರೈಲು ಮಾರ್ಗ ಹಾಗೂ ಮುಂಬೈ ಹಾಗೂ ಚೆನೈ ಕೈಗಾರಿಕಾ ಕಾರಿಡಾರ್ ರಸ್ತೆಯ ಅಭಿವೃದ್ದಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ.

ತುಮಕೂರಿನಲ್ಲಿ ಹೊಡಿಕೆದಾರರ ಸಮಾವೇಶ ಮಾಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದೇವು ಆದರೆ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ, ಜಿಲ್ಲೆಯ ಹಲವು ವರ್ಷಗಳ ಬೇಡಿಕೆ ಯಾದ ಹಲಸಿನ ಪಾರ್ಕ್, ತೆಂಗಿನ ಪಾರ್ಕ್, ಟೆಕ್ಸಟೈಲ್ ಪಾರ್ಕ್‍ನ್ನು ಈ ಬಜೆಟ್‍ನಲ್ಲಿ ನಿರೀಕ್ಷಿಸಿದ್ದೆವು ಅದು ಈಡೇರಿಲ್ಲ.

– ಟಿ.ಜೆ.ಗಿರೀಶ್ ಉಪಾಧ್ಯಕ್ಷರು, ಛೇಂಬರ್ ಆಫ್ ಕಾಮರ್ಸ್ ತುಮಕೂರು.

ರಾಜ್ಯ ಸರ್ಕಾರದ ಸರ್ವಸ್ಪರ್ಶಿ ಬಜೆಟ್

ತುಮಕೂರು: ಎಲ್ಲ ವರ್ಗಗಳು, ವಲಯ ಹಾಗೂ ಕ್ಷೇತ್ರಗಳನ್ನು ಒಳಗೊಂಡ ಬಜೆಟ್. ರೈತರ ಬಹುದಿನಗಳ ಬೇಡಿಕೆ ಯಶಸ್ವಿ ಯೋಜನೆ ಮರು ಜಾರಿ ಮಾಡಿರುವುದು, ಅಂಗನವಾಡಿ ಕಾರ್ಯಕರ್ತೆಯರಿಗೆ 1000 ವೇತನ ಹೆಚ್ಚು ಮಾಡಿರುವುದು, ಕುರಿಗಾಹಿಗಳಿಗೆ ಅನುಗ್ರಹ ಯೋಜನೆ ಮೂಲಕ ಮೃತ ಕುರಿಗಳಿಗೆ 2500 ರೂ.ಗಳಿಂದ 3500 ರೂ.ಗಳಿಗೆ ಹೆಚ್ಚಳ ಮಾಡಿರುವುದು,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 400 ಕೋಟಿ ಅಭಿವೃದ್ಧಿಗೆ ನೀಡಿರುವುದು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗೆ ಉತ್ತೇಜನ ನೀಡಿರುವುದು, ಕುರಿ ದೊಡ್ಡಿ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಇವೆಲ್ಲವೂ ಉತ್ತೇಜನ ನೀಡುವ ಅಂಶಗಳಾಗಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

– ಆರ್.ಕೆ.ಶ್ರೀನಿವಾಸ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಧುಗಿರಿ ಜಿಲ್ಲಾಧ್ಯಕ್ಷ .

 

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap