ರಾಜ್ಯದಲ್ಲಿ ಒಂದೇ ದಿನ 12 ಜನರಿಗೆ ಕೊರೋನಾ ಪಾಸಿಟಿವ್!!

ಬೆಂಗಳೂರು :

     ರಾಜ್ಯದಲ್ಲಿ ಇಂದು ಕೂಡಾ ಕೊರೊನಾ ಸೋಂಕಿನ ಸರಣಿ ಮುಂದುವರೆದಿದ್ದು, ರಾಜ್ಯದಲ್ಲಿ ಇಂದು ಒಂದೇ ದಿನ 12 ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ.

      ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಲಬುರ್ಗಿಯ ಇಬ್ಬರಿಗೆ, ವಿಜಯಪುರದ ಒಬ್ಬರಿಗೆ, ಧಾರವಾಡದ ಒಬ್ಬರಿಗೆ, ಬೆಳಗಾವಿಯ ಒಬ್ಬರಿಗೆ, ಮೈಸೂರಿನ ಮೂವರಿಗೆ, ಬಾಗಲಕೋಟೆಯ ಇಬ್ಬರಿಗೆ, ಗದಗ ಒಬ್ಬರಿಗೆ ಮತ್ತು ಮಂಡ್ಯದ ಒಬ್ಬರಿಗೆ ಸೇರಿ ರಾಜ್ಯದ 12 ಜನರಗಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಎಂದು ತಿಳಿಸಿದೆ. 

      ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 371ಕ್ಕೇ ಏರಿಕೆಯಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap