ಯಾದಗಿರಿ:
ವಿಷಕಾರಿ ನೀರು ಸೇವಸಿ ವೃದ್ಧೆ ಹೊನ್ನಮ್ಮ ಮೃತಪಟ್ಟ ಬೆನ್ನಲ್ಲೇ ಶಖಾಪುರ ಗ್ರಾಮದ ಮತ್ತೆ 12 ಮಂದಿ ಅಸ್ವಸ್ಥರಾಗಿದ್ದಾರೆ.
ನೀರು ಸೇವಿಸಿ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಖಾಪುರ ಗ್ರಾಮದ ಲಕ್ಷ್ಮೀ ಬಾಯಿ, ಕಸ್ತೂರಿ ಬಾಯಿ, ಶಾಂತಮ್ಮ ಹಾಗೂ ಬಸಮ್ಮ ಎಂಬವರನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೂ ಗ್ರಾಮದ ಒಟ್ಟು 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನವರಿ 9ರಂದು ವಿಷ ಬೆರೆಸಿದ್ದ ಬಾವಿ ನೀರನ್ನು ಸೇವಿಸಿ ಹಲವರು ಅಸ್ವಸ್ಥರಾಗಿದ್ದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮೂದನೂರು ಗ್ರಾಮದಲ್ಲಿ ನಡೆದಿತ್ತು. ಅದೇ ಬಾವಿ ನೀರು ಶಾಖಾಪುರ, ತೆಗ್ಗೆಳ್ಳಿ ಗ್ರಾಮಗಳಿಗೂ ಪೂರೈಕೆಯಾಗಿದೆ. ನೀರನ್ನು ಯಾರೂ ಸೇವಿಸದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿತ್ತು. ಆದರೂ ನೀರನ್ನು ಸೇವಿಸಿದ ಶಖಾಪುರ ಗ್ರಾಮದ ನಾಲ್ವರು ಅಸ್ವಸ್ಥರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ