15 ವರ್ಷದ ಮೀರಿದ ವಾಹನಗಳ ನಿಷೇಧ : ಡಿ.ಸಿ.ತಮ್ಮಣ್ಣ

ಬೆಂಗಳೂರು

         ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು 15 ವರ್ಷ ಮೀರಿದ ಹಳೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

         ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು ವಾಯು ಮಾಲಿನ್ಯದಿಂದ ಆರೋಗ್ಯ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗಿವೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಳೆಯ ವಾಹನಗಳ ನಿಷೇಧ ಅಗತ್ಯವಿದೆ ಎಂದರು
ನಗರದ ಪುರಭವನದಲ್ಲಿ ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ, 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸಲು ವಾರ್ಡ್ ಮಟ್ಟದಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ ನಡೆಸಲಾಗುವುದು. ಬಳಿಕ, ಕಾರು ವಾಹನ ಸಂಚಾರ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

         ರಾಜ್ಯದಲ್ಲಿ ಒಟ್ಟು 7 ಕೋಟಿ ಜನಸಂಖ್ಯೆ ಇದೆ.ಇದರ ಅರ್ಥ ಭಾಗದಷ್ಟು ವಾಹನಗಳು ನೊಂದಣಿ ಆಗಿವೆ.ಇನ್ನೂ, ರಾಜಧಾನಿ ಬೆಂಗಳೂರಿನಲ್ಲಿಯೇ, ಒಂದು ಕೋಟಿ ಜನ ಸಂಖ್ಯೆ ಇದ್ದು, ಇಲ್ಲಿಯೂ, 1 ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ.ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನ ಬರುತ್ತಿವೆ ಎಂದು ಹೇಳಿದರು

        ಅಂಕಿ ಅಂಶಗಳ ಪ್ರಕಾರ ಹಿಂದಿನ ಸಾಲಿನಲ್ಲಿ, ವಾಯು ಮಾಲಿನ್ಯ ಕಾರಣದಿಂದಲೇ ಬೆಂಗಳೂರಿನಲ್ಲಿಯೇ ನಾಲ್ಕು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದರು. ಮುಂದಿನ ದಿನಗಳ ಇದರ ಸಂಖ್ಯೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

       ಅತಿ ವೇಗವಾಗಿ, ರಸ್ತೆ ಅಭಿವೃದ್ಧಿ ಆಗುತಿತ್ತು, ಇದರಿಂದ ಅಪಘಾತ ಗಳ ಸಂಖ್ಯೆಯ ಹೆಚ್ಚಾಗಿದೆ,ಯಾವುದೇ ವಾಹನ ಚಾಲಕ ಕಾನೂನು ಪಾಲಿಸಿದರೆ, ಯಾವುದೇ ಅವಘಡ ಸಂಭವಿಸುವುದಿಲ್ಲ ಎಂದು ತಮ್ಮಣ್ಣ ನುಡಿದರು.

ಎಚ್ಚರವಹಿಸಿ

       ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆಗುವುದಿಲ್ಲ.ಇನ್ನೂ, ಮಳೆ ಸುರಿದರೆ, ಗುಂಡಿ ಗಳು ಆಕಸ್ಮಿಕವಾಗಿಯೇ ಇರುತ್ತವೆ. ಹೀಗಾಗಿ, ವಾಹನ ಸವಾರರು ಎಚ್ಚರದಿಂದ ಇರಬೇಕು

       ಇದಕ್ಕೂ ಮೊದಲು ಮಾತನಾಡಿದ ಶಾಸಕ ಉದಯ್ ಬಿ.ಗರುಡಾಚಾರ್, ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೇಯ ವಾಹನ ನಿಷೇಧ ಮಾಡಬೇಕು ಎಂದು ಹೇಳಿದರು.ನಗರದ ಪ್ರಮುಖ ಭಾಗಗಳಲ್ಲಿ, ನಿರ್ಮಾಣ ಮಾಡಿರುವ(ಸ್ಯಾಟಲೈಟ್) ಬಸ್ ನಿಲ್ದಾಣಗಳನ್ನು ಸಾರ್ವಜನಿಕರು ಬಳಕೆ ಮಾಡಬೇಕು. ಇದರಿಂದ, ನಗರದ ಒಳಗಡೆ ಸಂಚಾರ ತಡೆಯಬಹುದಾಗಿದೆ ಎಂದು ಸಲಹೆ ಮಾಡಿದರು.

ಅಪಘಾತ ಹೆಚ್ಚಳ

        ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ವಿ.ಪಿ.ಇಕ್ಕೇರಿ ಮಾತನಾಡಿ, ವಾಹನಗಳ ಚಾಲಕರು ಮತ್ತು ದ್ವಿಚಕ್ರವಾಹನಗಳ ಸವಾರರು ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದರಿಂದ ಅಪಘಾತಗಳು ಹೆಚ್ಚಾಗಿ ದೇಶದಲ್ಲಿ ಪ್ರತಿವರ್ಷ 1.50ಲಕ್ಷ ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪುತ್ತಿದ್ದಾರೆ.

         ಆಕಸ್ಮಿಕ ಅಪಘಾತಗಳ ಗಂಭೀರತೆಯನ್ನು ಅರಿತ ಸರಕಾರವು ಸವಾರರು ಅನುಸರಿಸಬೇಕಾದ ರಸ್ತೆ ಸುರಕ್ಷ ತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದರು.ಸಮಾವೇಶದಲ್ಲಿ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸಿನಿಮಾ ನಟ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ