ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ, 20 ಕೆಜಿ ಗಾಂಜಾ ವಶ!!

ಬೆಂಗಳೂರು:

      ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

      ಅಮೀರ್ ಅಹಮ್ಮದ್(28) ಬಂಧಿತ ಆರೋಪಿ. ಬಂಧಿತನಿಂದ 20 ಕೆಜಿ ಗಾಂಜಾ, 30‌ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

      ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಜಿನಿಯರಿಂಗ್ ಫ್ಯಾಕ್ಟರಿ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

     ಘಟನಾ ಸ್ಥಳದಲ್ಲಿ ಆರೋಪಿಯನ್ನು ಬಂಧಿಸಿ 1 ಕೆಜಿ ವಶಪಡಿಸಿಕೊಂಡು, ಬಳಿಕ ಆತನ ಮನೆಯಲ್ಲಿದ್ದ 19 ಕೆಜಿ ಗಾಂಜಾ ಸೇರಿ ಒಟ್ಟು 20 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     ಬಂಧಿತ ಹೋಟೆಲ್ ವೊಂದರಲ್ಲಿ ಸ್ವಾಗತಗಾರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ ಹಣ ಸಂಪಾದಿಸಲು ತನ್ನ ಸ್ನೇಹಿತ ಇರ್ಫಾನ್‌ನಿಂದ ಪರಿಚಿತವಾದ ವಿಶಾಖಪಟ್ಟಣಂ ವ್ಯಕ್ತಿ ಓರ್ವ ಬೆಂಗಳೂರಿಗೆ ಬಂದು ಗಾಂಜಾ ತಂದು ಕೊಡುತ್ತಿದ್ದನು ಎಂದು ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link