ಏ.14ಕ್ಕೆ ದೇಶಾದ್ಯಂತ ಲಾಕ್ ಡೌನ್ ಮುಕ್ತಾಯ : ಕೇಂದ್ರ ಸ್ಪಷ್ಟನೆ!!

ನವದೆಹಲಿ: 

    ಕೋರೋನಾ ವೈರಸ್ ತಡೆಗಟ್ಟಲು ಏಪ್ರಿಲ್ 14ರ ವರೆಗೆ ಮಾತ್ರ ದೇಶಾದ್ಯಂತ ಲಾಕ್ ಡೌನ್ ಲಾಕ್ಡೌನ್ ಇರಲಿದೆ. ಸದ್ಯಕ್ಕೆ ಲಾಕ್ಡೌನ್ ಮುಂದುವರೆಸುವ ಚಿಂತನೆ ಇಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದ್ದಾರೆ.

     ಹೌದು, ಏಪ್ರಿಲ್ 14ರ ದೇಶಾದ್ಯಂತದ ಲಾಕ್ ಡೌನ್ ಅನ್ನು ಆನಂತ್ರವೂ ಮತ್ತೆ ಮುಂದುವರೆಯಲಿದೆ. ಇನ್ನೂ ಕೆಲವು ತಿಂಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗುವುದು ಎಂಬ ವದಂತಿ ಹರಡಿದೆ.

      ಈ ಕುರಿತಂತೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ, ನನಗೆ ದೇಶಾದ್ಯಂತ ಏಪ್ರಿಲ್ 14ರ ನಂತ್ರವೂ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂಬ ವರದಿ ಕೇಳಿ ಅಚ್ಚರಿಯಾಯಿತು. ಆದ್ರೇ ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಇಂತಹ ಯಾವುದೇ ನಿರ್ಧಾರ ಸರ್ಕಾರದ ಮುಂದೆ ಇಲ್ಲ. ಏಪ್ರಿಲ್ 14ಕ್ಕೆ ದೇಶಾದ್ಯಂತ ಲಾಕ್ ಡೌನ್ ಕೊನೆಗೊಳ್ಳಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.