ಮತಗಟ್ಟೆಯಿಂದ ಹೊರಬಂದ ಮಹಿಳೆಯ ಸಾವು!!

0
20

ವಿಜಯಪುರ:

      ಮತದಾನ ಮಾಡಲೆಂದು ಮತಗಟ್ಟೆಗೆ ಬಂದಿದ್ದ ಮಹಿಳೆ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಐರಸಂಗ ಗ್ರಾಮದಲ್ಲಿ ನಡೆದಿದೆ.

      ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಮತಗಟ್ಟೆ ಸಂಖ್ಯೆ 32ರಲ್ಲಿ ಘಟನೆ ನಡೆದಿದ್ದು, 55 ವರ್ಷ ವಯಸ್ಸಿನ ಮಹಾದೇವಿ ಮಹಾದೇವಪ್ಪ ಸಿಂದಖೇಡ  ಮತ ಹಾಕಿ ಹೊರಬಂದು, (ತಲೆ ಸುತ್ತು ಬಂತೆಂದು) ಕುಸಿದು ಬಿದ್ದಿದ್ದಾರೆ.

      ತಕ್ಷಣ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೃದಯಾಘಾತವಾಗಿ ಮಹಾದೇವಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮತದಾನ ಮಾಡಿ ಬಂದು ಇದ್ದಕ್ಕಿದ್ದಂತೆ ಮೃತಪಟ್ಟಿದ್ದರಿಂದ ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

     

LEAVE A REPLY

Please enter your comment!
Please enter your name here