ಒಂದೇ ಕುಟುಂಬದ 26 ಮಂದಿಗೆ ಕೊರೊನಾ ಪಾಸಿಟಿವ್!

ಜೈಪುರ :

      ದೇಶದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜಸ್ಥಾನದ ಜೈಪುರದಲ್ಲಿ ಒಂದೇ ಕುಟುಂಬದ 26 ಮಂದಿಗೆ ಕೊರನಾ ಸೋಂಕು ದೃಢಪಟ್ಟಿದೆ.

      ಹೌದು, ರಾಜಸ್ಥಾನದ ಜೈಪುರದ ದರಿಬಾ ಮೋಟಿ ಕಟ್ಲಾ ರಾಮಗಂಜ್ ಪ್ರದೇಶದಲ್ಲಿರುವ ಒಂದೇ ಮನೆಯಲ್ಲಿ 26 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 

      26 ಜನರಲ್ಲಿ ಸೋಂಕು ಪತ್ತೆಯಾದ ತಕ್ಷಣ ಅವರೆಲ್ಲರನ್ನೂ ತಡರಾತ್ರಿ ಆಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

      ಇನ್ನು ಈವರೆಗೆ ಜೈಪುರ ನಗರವೊಂದರಲ್ಲೇ 2,260 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap