ಗದಗದಲ್ಲಿ ಲಿಂಗಾಯತ ಮಠಕ್ಕೆ ಮುಸ್ಲಿಂ ಮಠಾಧೀಶ!!

ಗದಗ : 

      ಬಸವ ತತ್ವಕ್ಕೆ ಅನುಗುಣವಾಗಿ ಲಿಂಗೆ ದೀಕ್ಷೆ ನೀಡುವ ಮೂಲಕ ಲಿಂಗಾಯತ್ ಮಠಕ್ಕೆ ಮುಸ್ಲಿಂ ಯುವಕ ಮಠಾಧೀಶನಾಗುತ್ತಿರುವ ಅಪರೂಪದ ವಿದ್ಯಮಾನ ಗದಗ್‌ನಲ್ಲಿ ನಡೆದಿದೆ.

       ದಿವಾನ್ ಶರೀಫ್‌ ರಹೀಮನ್‌ಸಾಬ್‌ ಮುಲ್ಲಾ (33) ಗೆ ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೊರಣ್ಣೇಶ್ವರ ಶೀವಯೋಗಿಗಳು ಲಿಂಗ ದೀಕ್ಷೆ ನೀಡಿದ್ದಾರೆ. ಶರೀಫ್ ಅವರನ್ನು ಅಸೂಟಿ ಗ್ರಾಮದ ಮುರುಘರಾಜೇಂದ್ರ ಕೊರುಣ್ಣೇಶ್ವರ ಶಾಂತಿಧಾಮಕ್ಕೆ ಉತ್ತರಾಧಿಕಾರಿನ್ನಾಗಿ ನೇಮಿಸಿದ್ದಾರೆ.

      ಶರೀಫ್ ಅವರಿಗೆ ಈಗಾಲೇ ಮದುವೆಯಾಗಿದ್ದು, ಹೆಂಡತಿ ಹಾಗೂ 4 ಮಂದಿ ಮಕ್ಕಳು ಇದ್ದಾರೆ. ತಂದೆ ರಹೀಮಸಾಬ್ ಹಾಗೂ ತಾಯಿ ಪಾತೀಮ್ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ಸಂಸಾರ ತ್ಯಜಿಸಿ, ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎಂದು ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲಾ ಧರ್ಮದ ಆಚರಣೆಗಳನ್ನು ಎಲ್ಲಾ ಜನಾಂಗದವರು ಬೆರೆತು ಆಚರಿಸಿದ್ರೆ ಸಮಾಜದಲ್ಲಿ ಕೂಡಿ ಬಾಳುವ ವಾತಾವರಣ ನಿರ್ಮಾಣ ಸಾಧ್ಯ ಎಂದು ದಿವಾನಿ ಶರೀಫ್ ಸ್ವಾಮಿ ಹೇಳಿದ್ದಾರೆ.

      ಇದೇ ಫೆಬ್ರವರಿ 26ರಂದು ಲಿಂಗಾಯತ ಮಠದ ಮಠಾಧೀಶರಾಗಿ ಗದ್ದುಗೆ ಏರಲಿದ್ದು, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವಗಳಿಂದ ಪ್ರೇರಿತಗೊಂಡಿರುವುದಾಗಿ ಸ್ವತಃ ರಹೀಮನ್‌ಸಾಬ್‌ ಮುಲ್ಲಾ ಅವರೇ ಹೇಳಿಕೊಂಡಿದ್ದಾರೆ. ಗದಗ ಜಿಲ್ಲೆಯ ಆಸುತಿ ಗ್ರಾಮದ ಬಳಿ ಇರುವ ಮುರುಗರಾಜೇಂದ್ರ ಕೋರಣೇಶ್ವರ ಶಾಂತಿಧಾಮ ಮಠಕ್ಕೆ ಶರೀಫ್ ಅವರು ಮಠಾಧೀಶರಾಗಲಿದ್ದಾರೆ.

     ಹುಟ್ಟಿದ್ದು ಮುಸ್ಲಿಂ ಸಮುದಾಯದಲ್ಲಾದರೂ, ಬಸವ ತತ್ವಕ್ಕೆ ಮಾರುಹೋಗಿ ಲಿಂಗ ದೀಕ್ಷೆ ಪಡೆದುಕೊಂಡಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap