ಲಾರಿಯ ಕಂಟೇನರ್​ನೊಳಗೆ 39 ಜನರ ಶವ ಪತ್ತೆ!!

ಲಂಡನ್ :

     ಲಾರಿ ಕಂಟೇನರ್​ ಒಳಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 39 ಜನರ ಶವ ಪತ್ತೆಯಾಗಿರುವ ಅಚ್ಚರಿಯ ಘಟನೆ ಈಸ್ಟರ್ನ್​ ಅವೆನ್ಯೂನ ವಾಟರ್​ಗ್ಲೇಡ್​ ಇಂಡಸ್ಟ್ರಿಯಲ್ ಪಾರ್ಕ್​ ಬಳಿ ನಡೆದಿದೆ.

     ಈ ಲಾರಿ ಬಲ್ಗೇರಿಯಾದಿಂದ ಬಂದಿರಬಹುದು ಎಂದು ಪೊಲೀಸರ ಅನುಮಾನ ವ್ಯಕ್ತಪಡಿಸಿದ್ದಾರೆ. ಲಾರಿ ಚಾಲಕ ಉತ್ತರ ಐರ್ಲೆಂಡ್ ಮೂಲದ 25ರ ಯುವಕ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

      ಘಟನೆ ಬೆಳಕಿಗೆ ಬರುತ್ತಿದ್ದಂತೆ ಒಬ್ಬರಾದರೂ ಬದುಕಿರಬಹುದೆಂಬ ಶಂಕೆಯೊಂದಿಗೆ ಆಯಂಬುಲೆನ್ಸ್​ ಕರೆಯಿಸಿಕೊಳ್ಳಲಾಗಿತ್ತು. ಆದರೆ, ಎಲ್ಲರೂ ಮೃತಪಟ್ಟಿದ್ದರು. 

      ಮೃತರಲ್ಲಿ 38 ಜನ ವಯಸ್ಕರಾಗಿದ್ದು, ಒಬ್ಬರು ಮಾತ್ರ ಹದಿಹರೆಯದವರಾಗಿದ್ದರು. ಮಾನವ ಕಳ್ಳಸಾಗಣೆ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap