ಮುಂಬೈನಿಂದ ಮಂಡ್ಯಕ್ಕೆ ಶವ ರವಾನೆ : ನಾಲ್ವರಿಗೆ ಕೊರೊನಾ ಸೋಂಕು!!

ಮಂಡ್ಯ:

Dead body of young boy found in Sec 27 | Punjab Express News - No.1

      ಮುಂಬೈನಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮಂಡ್ಯ ಜಿಲ್ಲೆಗೆ ತಂದು ಶವಸಂಸ್ಕಾರ ನಡೆಸಿದ್ದರಿಂದ ಅವರ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ.

      ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ಬಿ.ಕೊಡಗಹಳ್ಳಿ ಗ್ರಾಮದ ವ್ಯಕ್ತಿಯು, 10 ದಿನಗಳ ಹಿಂದೆ ಮೃತಪಟ್ಟಿದ್ದನು. ಹೀಗಾಗಿ ಮೃತನ ಶವವನ್ನು ಹುಟ್ಟೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

       ಈತ ಮುಂಬೈ ನಿವಾಸಿಯಾಗಿದ್ದರಿಂದ ಅನುಮಾನದ ಮೇರೆಗೆ ಮೃತನ ಕುಟುಂಬದವರನ್ನು ಕೆರೆತೊಣ್ಣೂರು ಗ್ರಾಮದ ಹಾಸ್ಟೆಲ್ಲೊಂದರಲ್ಲಿ ಹಾಸ್ಟೆಲ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇಂದು ಸಂಜೆ ಅವರ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದು ತನ್ನ ಪತ್ನಿ ಇಬ್ಬರು ಪುತ್ರಿಯರು ಹಾಗೂ ಪುತ್ರನಿಗೆ ಸೋಂಕು ತಗಲಿದೆ ಎನ್ನಲಾಗಿದೆ.

ಗ್ಲೌಸ್, ಗೌನ್, ಪಿಪಿಇ ಕಿಟ್ ಇಲ್ಲದೆ ಸಂಬಂಧಿಕರ ಸಂಪರ್ಕ :

      ಮೃತನ ಶವ ಪರೀಕ್ಷೆಗೆ ತೆರಳಿದ್ದ ಮೇಲುಕೋಟೆ PHC, ಪಾಂಡವಪುರ ತಾಲೂಕು ಆಸ್ಪತ್ರೆ ವೈದ್ಯರು ಗ್ಲೌಸ್, ಗೌನ್, ಪಿಪಿಇ ಕಿಟ್ ಇಲ್ಲದೆ, ಮುಂಜಾಗ್ರತ ಕ್ರಮ ಇಲ್ಲದೆ ಸಂಬಂಧಿಕರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.

ಮೃತನ ಅಂತಿಮ ದರ್ಶನ ಪಡೆದಿದ್ದ ಸಂಬಂಧಿಕರು :

       ಚನ್ನರಾಯಪಟ್ಟಣ, ಕೆ.ಆರ್.ಪೇಟೆ, ಪಾಂಡವಪುರ ತಾಲೂಕಿನ ವಿವಿಧೆಡೆ ಮಾರ್ಗ ಮಧ್ಯೆ ಆಂಬುಲೆನ್ಸ್ ನಿಲ್ಲಿಸಿ ಮೃತರ ಸಂಬಂಧಿಕರು ಅಂತಿಮ ದರ್ಶನ ಪಡೆದಿದ್ದರು ಎನ್ನಲಾಗಿದೆ.

       ಈ ಹಿನ್ನೆಲೆಯಲ್ಲಿ ಕೊಡಗಹಳ್ಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಮೇಲುಕೋಟೆ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಮಹಾರಾಷ್ಟ್ರದಿಂದಲೇ ಬಂದಿತ್ತು ಆಂಬುಲೆನ್ಸ್ :

      ಬಾಂಬೆಯಿಂದ ಶವವನ್ನು ಕರ್ನಾಟಕಕ್ಕೆ ಮಹಾರಾಷ್ಟ್ರ ಮೂಲದ MH 19 Z 4890 ಆಂಬುಲೆನ್ಸ್ ನಲ್ಲೇ ಶವವನ್ನು ತರಲಾಗಿದೆ. ಅಂಬುಲೆನ್ಸ್ ನಲ್ಲಿ ಓರ್ವ ವೈದ್ಯೆ ಹಾಗೂ ನಾಲ್ವರು ಸಿಬ್ಬಂದಿ ಬಂದಿದ್ದು, ಅವರನ್ನು ಯಾವುದೇ ಟೆಸ್ಟ್ ಮಾಡಿಸದೇ ಗ್ರಾಮಕ್ಕೆ ಬಿಡಲಾಗಿತ್ತು. ಗ್ರಾಮಸ್ಥರ ವಿರೋಧದ ನಡುವೆಯೂ ತಹಶೀಲ್ದಾರ್ ಮುಂದೆಯೇ ಗ್ರಾಮದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿತ್ತು. ಇನ್ನು ಈ ಘಟನೆಯಿಂದಾಗಿ ಪಾಂಡವಪುರದಲ್ಲಿ ಮಾರಕ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. 

ಜಿಲ್ಲಾಡಳಿತದ ವಿರುದ್ಧ ಎಚ್.ಡಿ.ಕೆ ಗರಂ :

      ಮಹಾರಾಷ್ಟ್ರದಿಂದ ವ್ಯಕ್ತಿಯ ಮೃತದೇಹ ತರಲು ಅನುಮತಿ ಕೊಟ್ಟವರಾರು..?ಅಕ್ರಮ ದಾಖಲೆ ಸೃಷ್ಟಿಸಿ ಮೃತದೇಹವನ್ನು ಮುಂಬೈನಿಂದ ಇಲ್ಲಿಗೆ ತಂದಿದ್ದು, ಮಹಾರಾಷ್ಟ್ರದಿಂದ ಇಲ್ಲಿಗೆ ಬರುವ ಮಧ್ಯೆ, ಸುಮಾರು 17 ಚೆಕ್ ಪೋಸ್ಟ್ ಸಿಗಲಿದ್ದು, ಇಲ್ಲಿ ಹೇಗೆ ಅನುಮತಿ ನೀಡಲಾಯಿತು..? ಮಂಡ್ಯದಲ್ಲಿ ಅನಾಹುತ ಸೃಷ್ಟಿಸಲು ಸರ್ಕಾರವೇ ಮುಂದಾಗಿದೆ. ಜಿಲ್ಲೆಯ ಜನತೆಯ ವಿಚಾರದಲ್ಲಿ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದೆ. ಎಂದು ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap