ಮೈಸೂರು :
ಆನ್’ಲೈನ್ ಗೇಮ್ ನೀಡುವ ಚಾಂಲೆಂಜ್ ಟಾಸ್ಕ್ ಅನ್ನು ಮಣಿಸಲು ಹೋಗಿ ನಗರದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.
9 ನೇ ತರಗತಿ ಓದುತ್ತಿದ್ದ ಬಾಲಕ ತಿಲಕ್ (ಹೆಸರು ಬದಲಾಯಿಸಲಾಗಿದೆ) ಯಾವಾಗಲೂ ಮೊಬೈಲ್‍ನಲ್ಲಿ ಗೇಮ್‍ವೊಂದನ್ನು ಆಡುತ್ತಿದ್ದ. ಅದರಲ್ಲಿ ನೀಡುತ್ತಿದ್ದ ಟಾಸ್ಕ್ ಅನ್ನು ಪೂರ್ಣಗೊಳಿಸುತ್ತಿದ್ದ.
ಇದೇ ರೀತಿ ಮಾಡಲು ಹೋದ ಬಾಲಕ ಶೆಟರ್ ಎಳೆಯುವ ತಂತಿಯೊಂದಿಗೆ ಪ್ರಯೋಗಕ್ಕೆ ಇಳಿದಿದ್ದಾನೆ. ಈ ವೇಳೆ ತಂತಿಯು ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.ತ ಆಡಿದ ಆನ್ ಲೈನ್ ಗೇಮ್ ಯಾವುದು ಎಂದು ತಿಳಿದು ಬಂದಿಲ್ಲ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
