ಬೆಂಗಳೂರು :
ನಾಳೆಯಿಂದ ಆನ್ಲೈನ್, ಆಫ್ಲೈನ್ ಕ್ಲಾಸ್ ಗಳನ್ನು ಬಂದ್ ಮಾಡಲಾಗುವುದು ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.
ಸರ್ಕಾರಕ್ಕೆ ನಾವು 15 ಬೇಡಿಕೆಗಳನ್ನು ಇಟ್ಟಿದ್ದೇವೆ. ನಾಳೆ ಮತ್ತೆ ಶಿಕ್ಷಣ ಸಚಿವರಿಗೆ ನಮ್ಮ ಬೇಡಿಕೆಗಳನ್ನು ಮತ್ತೆ ತಿಳಿಸುತ್ತೇವೆ. ಈ ಬೇಡಿಕೆಗಳನ್ನು ಸರ್ಕಾರ 10 ರಿಂದ 15 ದಿನಗಳ ವರೆಗೆ ಈಡೇರಿಸದಿದ್ದರೆ, ಆನ್ ಲೈನ್-ಆಫ್ ಲೈನ್ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ ಶಾಲೆಗಳನ್ನು ಬಂದ್ ಮಾಡಿ, ಜನವರಿ 6ರಿಂದ ಬೆಂಗಳೂರಿನಲ್ಲಿ ಒಕ್ಕೂಟಗಳು ಸತ್ಯಾಗ್ರಹ ಹೋರಾಟಕ್ಕೆ ಇಳಿಯಲಿವೆ. ಈ ಸಂಬಂಧ ಅಂತಿಮ ನಿರ್ಧಾರವನ್ನುೂ ರುಪ್ಸಾ ಸಂಸ್ಥೆ ಪ್ರಕಟ ಮಾಡಲಿದೆ. ಅಲ್ಲದೇ ಕ್ಯಾಮ್ಸ್ನ ಆರೋಪಕ್ಕೆ ಸ್ಪಷ್ಟೀಕರಣ ಕೂಡ ಕೊಡಲಿದೆ.
ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜನವರಿ 1ರ ಹೊಸ ವರ್ಷದಿಂದ ಬೋರ್ಡ್ ಪರೀಕ್ಷೆಗಳನ್ನು ಒಳಗೊಂಡಂತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಂಡಿದೆ. ಇಂತಹ ಶಾಲಾ-ಕಾಲೇಜು ಆರಂಭದ ಹೊಸ್ತಿಲಲ್ಲಿ ಇರುವಂತ ರಾಜ್ಯ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ