ಭೀಕರ ರಸ್ತೆ ಅಪಘಾತ ; 5 ತಿಂಗಳ ಮಗು ಸೇರಿ ಮೂವರ ದುರ್ಮರಣ!!

ಬೆಳಗಾವಿ : 

     ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ 5 ತಿಂಗಳ ಮಗು ಸೇರಿ ಮೂವರು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

     ಇಲ್ಲಿನ ಸಂಗನಕೇರಿ ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ 5 ತಿಂಗಳ ಮಗು, ಪತಿ-ಪತ್ನಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

     ಮೃತರು ರಾಯಭಾಗದ ಹಿಡಕಲ್ ಗ್ರಾಮದವರಾಗಿದ್ದು, ಪತಿ-ಪತ್ನಿ ಹಾಗೂ ಐದು ತಿಂಗಳ ಮಗು ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link