ಮಂಡ್ಯ:

“ಕರ್ಚೀಫು ಸೈಲೆಂಟಾಗಿ ಸೈಡಿಗಿದ್ರೆ ಸರಿ ಇಲ್ಲಾಂದ್ರೆ ಜನ ಯೂಸ್ ಮಾಡಿ ಬಿಸಾಕ್ತಾರೆ” ಎಂದು ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡರ ವಿರುದ್ಧ ನಟ ಯಶ್ ಗುಡುಗಿದ್ದಾರೆ.
ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡರು ನಿನ್ನೆ ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ ಇಂದು ಮಂಡ್ಯದಲ್ಲಿ ಓಡಾಡುತ್ತಿದ್ದಾರೆ ಹುಷಾರಾಗಿರೀ ಎಂದು ಹೇಳಿದ್ದರು.
ಶಿವರಾಮೇಗೌಡ ಅವರ ‘ಮಾಯಾಂಗನೆ’ ಎಂಬ ಅಪ್ರಬುದ್ಧ ಟೀಕೆಯ ವಿರುದ್ಧ ತಿರುಗಿ ಬಿದ್ದಿರುವ ರಾಕಿಂಗ್ ಸ್ಟಾರ್, ಸಂಸದರು ತಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿದ್ದರೆ ಸರಿ ಎಂದು ಇದೀಗ ಬಹಿರಂಗವಾಗಿ ಆವಾಜ್ ಹಾಕುವ ಮೂಲಕ ಮಂಡ್ಯ ಚುನಾವಣೆ ಮತ್ತಷ್ಟು ಕಾವು ಪಡೆಯುತ್ತಿದೆ.
“ ಬಸ್ನಲ್ಲಿ ಸೀಟಿಗೆ ಕರ್ಚೀಫ್ ಹಾಕುವಂತೆ ಎಂಪಿ ಸೀಟಿಗೆ ಶಿವರಾಮೇಗೌಡರನ್ನು ಮುಖ್ಯಮಂತ್ರಿಗಳು ಕರ್ಚೀಫ್ ತರ ಬಳಸಿದ್ದಾರೆ. ಹೀಗಾಗಿ ಶಿವರಾಮೇಗೌಡ ಕರ್ಚೀಫ್ ರೀತಿ ಸೈಲೆಂಟಾಗಿ ಸುಮ್ಮನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ದುರಹಂಕಾರಕ್ಕೆ ಜನರೇ ಬುದ್ಧಿ ಕಲಿಸ್ತಾರೆ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








