ಮತ್ತೆ ಏರಿಕೆಯಾದ ವಿದ್ಯುತ್ ದರ..?

ಬೆಂಗಳೂರು:Related image

      ಕಳೆದ ಮೇ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 25ರಿಂದ 38 ಪೈಸೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ವಿದ್ಯುತ್ ದರ ಏರಿಸಲು  ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಮುಂದಾಗಿದೆ.

      ಅ. 1ರಿಂದ ಪ್ರತಿ ಯೂನಿಟ್‌ಗೆ 14 ಪೈಸೆಯಷ್ಟು ವಿದ್ಯುತ್‌ ದರ ಪರಿಷ್ಕೃತ ದರ ಜಾರಿಗೆ ಬರುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಎಲ್ಲ ವಿದ್ಯುತ್‌ ಪ್ರಸರಣ ನಿಗಮಗಳಿಗೆ (ಎಸ್ಕಾಂ) ಆದೇಶ ನೀಡಿದೆ. ಈ ವರ್ಷ ದರ ಏರಿಕೆಯಾಗುತ್ತಿರುವುದು ಎರಡನೇ ಬಾರಿ. ಮೇ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 25ರಿಂದ 38 ಪೈಸೆ ಏರಿಕೆ ಮಾಡಲಾಗಿತ್ತು.

ದರ ಹೆಚ್ಚಳಕ್ಕೆ ಕಾರಣ :

      ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ 6 ಪೈಸೆ, 2017ರ ಜುಲೈನಿಂದ 2018ರ ಮಾರ್ಚ್‌ವರೆಗೆ 15 ಪೈಸೆ ಇಂಧನ ಹೊಂದಾಣಿಕೆ ಶುಲ್ಕ ಸಂಗ್ರಹಿಸಲಾಗಿತ್ತು. ಸದ್ಯ ಕಲ್ಲಿದ್ದಲು ಕೊರತೆಯಿದೆ. ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಸಾಗಾಟ ಸಮಸ್ಯೆಗಳೂ ಎದುರಾಗಿವೆ. ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕದಲ್ಲಿ ರೂ. 94 ಕೋಟಿಯಷ್ಟು ಆರ್ಥಿಕ ಹೊರೆ ಬಿದ್ದಿದೆ. ಹೀಗಾಗಿ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.

      ಈ ದರ ಡಿ. 31ರವರೆಗೆ ಇರಲಿದೆ. ಬಳಿಕ ದರ ಮತ್ತೆ ಪರಿಷ್ಕರಣೆಯಾಗಬಹುದು ಅಥವಾ ಆಗದೆಯೂ ಇರಬಹುದು. ಇಂಧನ ವೆಚ್ಚ (ವಿದ್ಯುತ್‌ ಸ್ಥಾವರಗಳಿಗೆ ಬಳಕೆಯಾಗುವ ಕಲ್ಲಿದ್ದಲಿನ ದರ) ಏರಿಕೆಯ ಮೇಲೆ ದರ ಹೆಚ್ಚಳ ಅವಲಂಬಿತವಾಗಿರುತ್ತದೆ. ದರ ಏರಿಕೆಯ ಪ್ರಮಾಣ ಒಂದು ಪ್ರಸರಣ ಕಂಪನಿಯಿಂದ ಇನ್ನೊಂದಕ್ಕೆ (ಎಸ್ಕಾಂಗಳಿಗೆ) ಭಿನ್ನವಾಗಿರುತ್ತದೆ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ