
ಅಂಬರೀಶ್ ಅವರನ್ನು ಕುಟುಂಬಸ್ಥರು ಮಾತ್ರವಲ್ಲ ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಪ್ರತಿನಿತ್ಯವೂ ಸ್ಮರಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ಮತ್ತ ರಾಧಿಕಾ ಪಂಡಿತ್ ಮಗಳಿಗೆ ಅಂಬರೀಶ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಅಂಬರೀಶ್ ಅವರು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದ ಗಿಫ್ಟ್ ಇದು.
ಹೌದು, ಅಂಬರೀಶ್ ಅವರು ಸಾಯುವ ಮುನ್ನವೇ ಯಶ್ ಗೆ ಹುಟ್ಟಲಿರುವ ಮಗುವಿಗಾಗಿ 1.5 ಲಕ್ಷ ರುಪಾಯಿ ಬೆಲೆಯ ತೊಟ್ಟಿಲನ್ನು ಬುಕ್ ಮಾಡಿದ್ದರು. ಅಂಬರೀಶ್ ವಿಧಿವಶರಾಗುವ ಮುನ್ನ ಬುಕ್ ಮಾಡಿದ್ದ ಗಿಫ್ಟ್ ಒಂದು ಎಲ್ಲರ ಗಮನ ಸೆಳೆದಿದೆ.
ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ ಎನ್ನಲಾಗುತ್ತಿದೆ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರು.
ಸುಮಲತಾ ನಂಬರ್ ಗೆ ಮೆಸೆಜ್ :

ಈ ವಿಚಾರ ಅಂಬರೀಶ್ ಹೊರತುಪಡಿಸಿ ಯಾರಿಗೂ ಗೊತ್ತಿರಲಿಲ್ಲ. ಸುಮಲತಾ ಅವರಿಗೆ ಕೂಡ ಈ ವಿಷಯ ತಿಳಿದಿರಲಿಲ್ಲ. ಅಂಬರೀಶ್ ಬಳಸುತ್ತಿದ್ದ ಮೊಬೈಲ್ ಗೆ ಮೊನ್ನೆ ತೊಟ್ಟಿಲು ರೆಡಿ ಎಂಬ ಸಂದೇಶ ಬಂದಿದೆ. ನಂತರ ಈ ಬಗ್ಗೆ ಸುಮಲತಾ ವಿಚಾರಿಸಿದಾಗ ಅಂಬರೀಶ್ ಅವರು ಯಶ್ ದಂಪತಿಗೆ ಹುಟ್ಟುವ ಮಗುವಿಗಾಗಿ ತೊಟ್ಟಿಲು ಆರ್ಡರ್ ಮಾಡಿದ್ದರು ಎಂದು ತಿಳಿದುಬಂದಿದೆ.
ಯಶ್ ಗೆ ವಿಷಯ :
ಇದನ್ನು ನೋಡಿದ ಸುಮಲತಾ ಅವರು ಯಶ್ಗೆ ಪೋನ್ ಮಾಡಿ ‘ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ’ ಎಂದು ತಿಳಿಸಿದ್ದಾರೆ. ಸುಮಲತಾ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಯಶ್ ಮೌನವಾದ್ರು. ಸದ್ಯ ಯಶ್ ಮಗಳಿಗೆ ಈ ಉಡುಗೊರೆಯನ್ನು ಸುಮಲತಾ ಅವರು ನೀಡಿದ್ದಾರೆ.
ತೊಟ್ಟಲಿನ ವಿಶೇಷತೆ:
ಸಾಗವಾನಿ ಕಟ್ಟಿಗೆಯಿಂದ ತೊಟ್ಟಿಲನ್ನು ಸಿದ್ಧಪಡಿಸಲಾಗುತ್ತಿದ್ದು, ಅರಗಿನಿಂದ ತಯಾರಿಸಿದ ಬಣ್ಣ ಬಳಸಿ ಕೃಷ್ಣ ಜನ್ಮಾವತಾರ ಸೇರಿದಂತೆ ವಿವಿಧ ಚಿತ್ರಗಳನ್ನು ತೊಟ್ಟಿಲ ಮೇಲೆ ಬಿಡಿಸಲಾಗಿದೆ. ಈ ತೊಟ್ಟಿಲು ನೂರು ವರ್ಷ ಕಳೆದರೂ ಅಂದಗೆಡುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








