ಬೆಂಗಳೂರು:
ಅಂಬರೀಶ್ ಅವರ ಹಳಿ ತಪ್ಪುತ್ತಿದ್ದ ಜೀವನವನ್ನು ಸರಿ ದಾರಿಗೆ ತಂದವರು ಸುಮಲತಾ ಎಂದು ಕೆಲವರು ಹೇಳುವುದಿದೆ. ಇದು ನಿಜವೆಂಬುದಕ್ಕೆ ಅಂಬರೀಶ್ ಅವರು ಪತ್ನಿ ಸುಮಲತಾ ಅವರ ಮೊಬೈಲ್ ನಂಬರ್ ಅನ್ನು ಅಂಬರೀಶ್ ವಿಶೇಷವಾದ ಹೆಸರಿನಿಂದ ಸೇವ್ ಮಾಡಿದ್ದುದೇ ಸಾಕ್ಷಿ. ಅವರು ಸೇವ್ ಮಾಡಿದ್ದ ಹೆಸರೇ ಹೇಳುತ್ತಿತ್ತು ಸುಮಲತಾ ಎಡೆಗೆ ಅಂಬರೀಶ್‌ಗೆ ಯಾವ ಪರಿ ಪ್ರೀತಿ ಇತ್ತೆಂದು.
ಹೌದು, ಅಂಬರೀಶ್ ಅವರು ಸುಮಲತಾ ಅವರ ಸಂಖ್ಯೆಯನ್ನು ‘ಗಾಡೆಸ್’ ಎಂದು ಸೇವ್ ಮಾಡಿಕೊಂಡಿದ್ದರು. ಅಂಬರೀಶ್ ಅವರ ಮೊಬೈಲ್‌ಗೆ ‘ಗಾಡೆಸ್’ ಎಂಬ ಸಂಖ್ಯೆಯಿಂದ ಕರೆ ಬಂದರೆ ರಿಸೀವ್ ಮಾಡದೇ ಇರುತ್ತಿರಲಿಲ್ಲ. ಏಕೆಂದರೆ, ಅದು ಪತ್ನಿ ಸುಮಲತಾ ಅವರಿಂದ ಬರುವ ಕರೆ ಆಗಿರುತ್ತಿತ್ತು.
ಸುಮಲತಾ ಅವರು ಅಂಬರೀಶ್ ಅವರ ಬಾಳಿಗೆ ಬಂದ ಮೇಲೆ ಅಂಬರೀಶ್ ಅವರ ಜೀವನ ಸಾಕಷ್ಟು ಸುಧಾರಿಸಿತು. ಹಾಗಾಗಿಯೇ ಅಂಬರೀಶ್ ಅವರು ಸುಮಲತಾ ಹೆಸರನ್ನು ಗಾಡೆಸ್(ದೇವತೆ) ಎಂದು ಸೇವ್ ಮಾಡಿಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ