ಬೆಂಗಳೂರು:
ರಾಜಕಾರಣಿ ಅಂಬರೀಶ್ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅಂಬರೀಶ್ ಅವರ ಮೃತದೇಹವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಂತಿಮದರ್ಶನಕ್ಕೆ ಇಡಲಾಗಿತ್ತು. ಈಗ ಸಾರ್ವಜನಿಕರ ದರ್ಶನಕ್ಕಾಗಿ ಮಂಡ್ಯಕ್ಕೆ ಶರೀರವನ್ನು ರವಾನೆ ಮಾಡಲಾಗುತ್ತಿದೆ.
ಇಂದು ಸಂಜೆ ಸೇನಾ ಹೆಲಿಕಾಪ್ಟರ್ ಮೂಲಕ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ರವಾನೆಯಾಗಲಿದೆ. ಕಂಠೀರವ ಸ್ಟೇಡಿಯಂನಿಂದ ಸಂಜೆ 4.30ಕ್ಕೆ ಹೆಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ.
ಆಂಬುಲೆನ್ಸ್‌ನಲ್ಲಿ ಕಂಠೀರವ ಸ್ಟೇಡಿಯಂನಿಂದ ಅಂಬರೀಶ್ ಅವರ ಮೃತದೇಹ ಎಚ್‌ಎಎಲ್ ವಿಮಾನ ನಿಲ್ದಾಣದ ಕಡೆಗೆ ರವಾನೆಯಾಗುತ್ತಿದೆ. ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ಪಾರ್ಥಿವ ಶರೀರಕ್ಕೆ ಒಂದು ಹೆಲಿಕ್ಯಾಪ್ಟರ್ ನಿಯೋಜನೆ ಮಾಡಲಾಗಿದ್ದು, ಮಾಹಿತಿ ಪ್ರಕಾರ ಪಾರ್ಥಿವ ಶರೀರದ ಜತೆ ಆಪ್ತರು ತೆರಳಲು ಎರಡು ಪ್ರತ್ಯೇಕ ಚಾಪರ್ಗಳನ್ನ ರೆಡಿ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಮಂಡ್ಯದತ್ತ ಪ್ರಯಾಣ ಮಾಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ