ಬೆಂಗಳೂರು:
ಬೆಂಗಳೂರು ನಗರದ ಆನಂದ್ ರಾವ್ ವೃತ್ತದ ಫ್ಲೈ ಓವರ್‌ಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮೇಲುಸೇತುವೆ ಎಂದು ನಾಮಕರಣ ಮಾಡಲಾಗಿದೆ.
ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲು ರೈಲು ನಿಲ್ದಾಣದ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮೇಲುಸೇತುವೆ ಉದ್ಘಾಟಿಸಿದರು.
ಬೆಂಗಳೂರು ನಗರದ ಹೃಯದ ಭಾಗದಲ್ಲಿರುವ ಫ್ಲೈ ಓವರ್‌ಗೆ ಇಷ್ಟು ದಿನ ನಾಮಕರಣ ಮಾಡಿರಲಿಲ್ಲ. ಆನಂದ್ ರಾವ್ ಸರ್ಕಲ್ ಫ್ಲೈ ಓವರ್ ಎಂದೇ ಕರೆಯಲಾಗುತ್ತಿತ್ತು. ಈಗ ಮೇಲು ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಇಡಲಾಗಿದೆ. ಬಿಬಿಎಂಪಿ ಈ ಫ್ಲೈ ಓವರ್ ನಿರ್ವಹಣೆ ನೋಡಿಕೊಳ್ಳುತ್ತದೆ.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಫ್ಲೈ ಓವರ್ ಮೆಜೆಸ್ಟಿಕ್‌ನಿಂದ ರೇಸ್‌ಕೋರ್ಸ್ ರಸ್ತೆ, ವಿಧಾನಸೌಧ, ಎಂ. ಜಿ. ರಸ್ತೆ, ಹಡ್ಸನ್ ವೃತ್ತ, ಕೆ. ಆರ್. ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಗಾಂಧಿನಗರ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
