ಆಕೇಷಿಯಾ ಮತ್ತು ನೀಲಗಿರಿ ಕುರಿತು ಸೂಕ್ತ ಅಧ್ಯಯನಕ್ಕೆ ಒತ್ತು : ಜೆಸಿಎಂ

ಬೆಂಗಳೂರು

    ರಾಜ್ಯದಲ್ಲಿ ಆಕೇಷಿಯಾ ಮತ್ತು ನೀಲಗಿರಿ ಮರಗಳನ್ನು ಬೆಳೆಯುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಸೂಕ್ತ ಅಧ್ಯಯನ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ವಿಧಾನಸಭೆಗಿಂದು ತಿಳಿಸಿದರು.

      ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮರಗಳು ಹೆಚ್ಚಿನ ನೀರು ಹೀರಿಕೊಂಡು ಭೂಮಿಯನ್ನು ಬರಡು ಮಾಡುತ್ತವೆ ಎಂಬ ಚರ್ಚೆಗಳಿವೆ. ಹಾಗಾಗಿ ಆ ಮರಗಳನ್ನು ಸರ್ಕಾರ ಉತ್ತೇಜಿಸುತ್ತಿಲ್ಲ ಎಂದರು.

     ಈ ಕುರಿತು ಸಧ್ಯಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನ ವರದಿ ಸರ್ಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ವರದಿ ಆಧರಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap