ತುಮಕೂರು : ಸಿದ್ದಗಂಗಾ ಶ್ರೀಗಳ ಗದ್ದುಗೆ ಮೇಲೆ ಶಿವಲಿಂಗ ಪ್ರತಿಷ್ಠಾಪನೆ!!

ತುಮಕೂರು:

      ಸಿದ್ದಗಂಗೆಯ ಶಿವೈಕ್ಯ ಶತಾಯುಷಿ ಶಿವಕುಮಾರ ಶ್ರೀಗಳ ಐಕ್ಯ ಸ್ಥಳದ ಮೇಲೆ ಇಂದು ವಿಶೇಷವಾದ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ.

      ಇಂದು(ನ.11) ಬೆಳಗ್ಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ.

      ಲಿಂಗವನ್ನು ಶ್ರೀಗಳು ತಂಗುತ್ತಿದ್ದ ಹಳೆ ಮಠದಲ್ಲಿ ಮಂಡಳದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿವಿಧಾನ ಪೂರೈಸಲಾಗಿತ್ತು. ಹೀಗೆ ಸಕಲ ವಿಧಾನ ಪೂರೈಸಿ ದೈವೀ ಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.

       ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರು ಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಪಾನ ಬಟ್ಟಲು ಸೇರಿ ಪೂರ್ಣವಾಗಿ ಲಿಂಗ 38 ಇಂಚು ಇದೆ.

ಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಸಮೂಹ ಹಾಜರಿದ್ದು, ಶಿವಲಿಂಗ ದರ್ಶನ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap