ಬಳ್ಳಾರಿ:
ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ ನಡೆಸಿ ಒಟ್ಟು 6 ಚಿರತೆಗಳು ಬೋನಿಗೆ ಕೆಡವಿದ್ದಾರೆ . ಕಂಪ್ಲಿ ತಾಲೂಕಿನ ದೇವಲಾಪುರ, ಸೋಮಲಾಪುರ ಗ್ರಾಮಗಳ ಸರಹದ್ದಿನಲ್ಲಿ ಸುಮಾರು 11 ಕಡೆಗಳಲ್ಲಿ ಬೋನ್ಗಳನ್ನು ಇರಿಸಲಾಗಿತ್ತು.
ಸೋಮಲಾಪುರದ ಎರದಮಟ್ಟಿಯಲ್ಲಿ 2, ದೇವಲಾಪುರದ ಕಾನಮಟ್ಟಿ 1, ಕರಿಮಟ್ಟಿ ಬಳಿ ಎರಡು, ದೇವಲಾಪುರದ ರಾಜನಮಟ್ಟಿ ಗುಡ್ಡ ಪ್ರದೇಶದಲ್ಲಿ ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.
