ಫೆ.19ರಂದು ಕರ್ನಾಟಕ ಬಂದ್ ಬದಲಾಗಿ ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ

ಬೆಂಗಳೂರು : 

 ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಖಂಡಿಸಿ ಫೆ.19ರಂದು ವಾಟಾಳ್​ ನಾಗರಾಜ್ ಬಂದ್​ಗೆ ಕರೆ ನೀಡಿದ್ದರು. ಆದರೆ, ಈಗ ಅವರು ಬಂದ್​ ದಿನಾಂಕ ಮುಂದೂಡಿದ್ದಾರೆ. ಕರ್ನಾಟಕ ಬಂದ್ ಬದಲಾಗಿ ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದವು.  ಆದರೆ, ಕುಂಭಮೇಳ, ಏರ್​ಶೋ, ಮಹಾಮಸ್ತಕಾಭಿಷೇಕ ನಡೆಯಲಿದೆ. ಹಾಗಾಗಿ, ಬಂದ್​ ದಿನಾಂಕವನ್ನು ಅವರು ಮುಂದೂಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ 19ರಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

ಈಗಾಗಲೇ ಕೆಎಸ್ಆರ್​ಟಿಸಿ, ಎನ್​ಡಬ್ಲ್ಯೂಕೆಆರ್​ಟಿಸಿ ಬಂದ್​ಗೆ ಬೆಂಬಲ ಸೂಚಿಸಿದ್ದವು. ಹಾಗಾಗಿ ಸರ್ಕಾರಿ ಬಸ್​ಗಳು ರಸ್ತೆಗೆ ಇಳಿಯುವುದು ಅನುಮಾನ ಎನ್ನಲಾಗಿತ್ತು.  ಕೈಗಾರಿಕಾ ಸಂಘಟನೆಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘ, ಸರ್ಕಾರಿ ನೌಕರರ ಸಂಘ , ಉಳಿದಂತೆ ಚಿತ್ರರಂಗ ಬಂದ್​ಗೆ ಬೆಂಬಲ ನೀಡಿತ್ತು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap