ದೇವೇಗೌಡ, ಸಿದ್ದರಾಮಯ್ಯರಿಂದ ನಮಗೆ ಅನ್ಯಾಯ – ಬಿ.ಸಿ.ಪಾಟೀಲ್

ಬೆಂಗಳೂರು:

     ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮಾತು ಕೇಳಿಕೊಂಡು ಸ್ಪೀಕರ್ ರಮೇಶ್ ಕುಮಾರ್ ಅನ್ಯಾಯ ಮಾಡಿದರು ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

      ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯಾರದೋ ಮಾತನ್ನ ಕಟ್ಟಿಕೊಂಡು ಏಕಪಕ್ಷೀಯವಾಗಿ ನಡೆದುಕೊಂಡರು. ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಾತು ಕೇಳಿಕೊಂಡು ನಮ್ಮನ್ನು ಮೊಲೆಗುಂಪು ಮಾಡಿದರು ಎಂದು ಆರೋಪಿಸಿದ್ದಾರೆ.

      ಸಮ್ಮಿಶ್ರ ಸರ್ಕಾರ ಬೀಳೋದಕ್ಕೆ ನಾವು 15 ಜನ ಶಾಸಕರು ಕಾರಣ. ಅದು ಸತ್ಯ ಯಾಕೆಂದರೆ ಹೆಚ್ ಡಿ ಕುಮಾರಸ್ವಾಮಿ ಅವರ ತಾರತಮ್ಯದ ರಾಜಕೀಯ ನಡೆಸಿದ್ದರು ಎಂದು ಕಿಡಿಕಾರಿದ್ದಾರೆ.

      ಏನೇ ಆದರೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಪಕ್ಕಾ. ಸುಪ್ರೀಂ ಕೋರ್ಟ್​​​​ನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ, ಸುಪ್ರೀಂಕೊರ್ಟ್​ ನಮ್ಮ ಪರವಾಗಿ ತೀರ್ಪು ನೀಡುತ್ತೆ ಎಂಬ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ