ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆ ; ತಾಯಿ- ನವಜಾತ ಶಿಶು ದಾರುಣ ಸಾವು

ಮಂಡ್ಯ:

      ಆಸ್ಪತ್ರೆ ಎದುರೇ ತಾಯಿ-ಮಗು ನರಳಾಡಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

      ಸೋನು ಎಂಬ ಮಹಿಳೆಗೆ ಇಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಕೆ ಮನೆಯವರು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕೋವಿಡ್​​ ರಿಪೋರ್ಟ್​ ಇಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

     ಸುಮಾರು 2 ಗಂಟೆಗಳ ಕಾಲ ಹೆರಿಗೆ ನೋವುಂಡ ಮಹಿಳೆಗೆ ನಿಂತ ಸ್ಥಳದಲ್ಲೇ ಹೆರಿಯಾಗಿದೆ. ಆದರೆ ಮಗು ಜನಿಸುತ್ತಿದ್ದಂತೆ ದುರಾದೃಷ್ಟವಶಾತ್​ ತಾಯಿ ಮಗು ಇಬ್ಬರೂ ಆಸ್ಪತ್ರೆ ಎದುರೇ ಸಾವನ್ನಪ್ಪಿದ್ದಾರೆ.

      ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ಧ ಮೃತ ಮಹಿಳೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap