ಭಾರಿ ಬೆಂಕಿ ಅವಘಡ, ಕಾಂಪ್ಲೆಕ್ಸ್‌ನ 17 ಅಂಗಡಿಗಳು ಭಸ್ಮ!!

ಬಾಗಲಕೋಟೆ :  

      ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಸಂಭವಿಸಿ 17 ಅಂಗಡಿ ಮಳಿಗೆಗಳು ಸುಟ್ಟು ಭಸ್ಮಗೊಂಡು 20 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿರುವ ಘಟನೆ ಜಿಲ್ಲೆಯ ಇಳಕಲ್ ನಗರದಲ್ಲಿ ಬೆಳಗಿನ ಜಾವ ನಡೆದಿದೆ.

      ಇಳಕಲ್‍ನ ಬಸವೇಶ್ವರ ವೃತ್ತದಲ್ಲಿರುವ ಚಂದ್ರಶೇಖರ್ ಸಜ್ಜನ್ ಎಂಬುವರಿಗೆ ಸೇರಿದ 5 ಅಂತಸ್ತಿನ ವಾಣಿಜ್ಯ ಮಳಿಗೆಯಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಸೂಪರ್ ಮಾರ್ಕೇಟ್, ಹಾರ್ಡ್‍ವೇರ್, ಬೇಕರಿ, ಇಳಕಲ್ ಸೀರೆ ಅಂಗಡಿ, ಪೀಟರ್ ಇಂಗ್ಲೆಂಡ್ ಬಟ್ಟೆ ಶೋರೂಂ ಸೇರಿ 17 ಮಳಿಗೆಗಳು ಆಹುತಿಯಾಗಿವೆ.

     ಈ ವೇಳೆ ವಾಣಿಜ್ಯ ಸಂಕೀರ್ಣದಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಸಿಹಿ ತಿನಿಸಿನ ಮಾರಾಟ ಮಳಿಗೆಗಳು, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ 20 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

     ಸುದ್ದಿ ತಿಳಿದ ತಕ್ಷದ ಗುಳೇದಗುಡ್ಡ, ಕುಷ್ಟಗಿ, ಇಳಕಲ್, ಹುನಗುಂದ, ಬಾಗಲಕೋಟೆ ಭಾಗದಿಂದ 8 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ.

     ಈ ಕಟ್ಟಡದಲ್ಲಿದ್ದ ಹಾರ್ಡ್‍ವೇರ್ ಅಂಗಡಿಯಲ್ಲಿ ಉಂಟಾದ ಶಾರ್ಟ್‍ಸಕ್ರ್ಯೂಟ್‍ನಿಂದ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap