ವಿಜಿ ಮತ್ತವರ ಬೆಂಬಲಿಗರ ಜಾಮೀನು ಅರ್ಜಿ ವಜಾ

ಬೆಂಗಳೂರು:

      ಅಪಹರಣ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರನಟ ದುನಿಯಾ ವಿಜಿ ಮತ್ತವರ ಬೆಂಬಲಿಗರ ಜಾಮೀನು ಅರ್ಜಿಯನ್ನು ನಗರದ 8ನೇ ಎ.ಸಿ.ಎಂ.ಎಂ. ನ್ಯಾಯಾಲಯ ತಿರಸ್ಕರಿಸಿದೆ.

      ಜಿಮ್ ತರಬೇತುದಾರ ಮಾರುತಿ ಗೌಡ ಅವರನ್ನು ಅಪಹರಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ದುನಿಯಾ ವಿಜಿ ಮತ್ತವರ ಬೆಂಬಲಿಗರಿಗೆ ನ್ಯಾಯಾಂಗ ಬಂಧನವೇ ಗತಿಯಾಗಿದೆ.

      8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಹೇಶ್‍ಬಾಬು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿ, ಜಾಮೀನು ಮನವಿಯನ್ನು ತಿರಸ್ಕರಿಸಿದರು.

     ಈ ತಿಂಗಳ 22ರ ರಾತ್ರಿ ದುನಿಯಾ ವಿಜಿ ಮತ್ತು ಸ್ನೇಹಿತರು ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದೇಹದಾಢ್ರ್ಯ ಸ್ಪರ್ಧೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾರುತಿ ಗೌಡನನ್ನು ಅಪಹರಿಸಿ, ಕಾರಿನಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಂದು ರಾತ್ರಿಯೇ ಆರೋಪಿಗಳನ್ನಯ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.

     ಸೆ. 23ರಂದು ನಟ ವಿಜಿ ಸೇರಿ 4 ಆರೋಪಿಗಳ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ವಾದ-ಪ್ರತಿವಾದದ ಬಳಿಕ ಜಾಮೀನು ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

     ಪರಪ್ಪನ ಅಗ್ರಹಾರ ಸೇರಿರುವ ವಿಜಿ ಜೈಲಿನಲ್ಲಿ 3ನೇ ದಿನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಸಾಮಾನ್ಯ ಕೈದಿಯ ಸ್ಥಾನಮಾನದಲ್ಲಿರುವ ಅವರು ತಮ್ಮ ಮನವಿ ತಿರಸ್ಕøತಗೊಳ್ಳುತ್ತಿದ್ದಂತೆ ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ.

     ನಟ ವಿಜಿ ಪರ ವಕೀಲಯರು ಬಹುತೇಕ ನಾಳೆ ಸೆಷನ್ಸ್ ಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಂಭವವಿದೆ.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ