ಸೈನಿಕರಿಂದ ಸ್ವಚ್ಛಗೊಂಡ ಹಲಸೂರು ಕೆರೆ

0
27

ಬೆಂಗಳೂರು: 

      ಭಾರತೀಯ ಸೇನೆಯ ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಪ್‌ ಮತ್ತು ಕೇಂದ್ರದ ಸಾವಿರಕ್ಕೂ ಅಧಿಕ ಸೈನಿಕರು ಪರಿಸರ ಸಂರಕ್ಷಣೆಯ ಅಭಿಯಾನದಡಿ ಬುಧವಾರ ಹಲಸೂರು ಕೆರೆಯಲ್ಲಿ ಸ್ವತ್ಛತಾ ಕಾರ್ಯ ನಡೆಸಿದರು.

      ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಪ್‌ ಮತ್ತು ಕೇಂದ್ರದ ಸೈನಿಕರು ತಮ್ಮ ನಿತ್ಯದ ತರಬೇತಿಗಾಗಿ ಹಲಸೂರು ಕರೆ ಬಳಸಿಕೊಳ್ಳುತ್ತಾರೆ. ಕಳೆದ ಕೆಲವು ವರ್ಷಗಳಿಂದ ಒಳಚರಂಡಿ ನೀರು ನೇರವಾಗಿ ಕೆರೆ‌ಗೆ ಹರಿದುಬರುತ್ತಿರುವುದರಿಂದ ನೀರು ಕಲುಷಿತವಾಗಿರುವ ಜತೆಗೆ ಪಾಚಿ ಹಾಗೂ ಅನುಪಯುಕ್ತ ವಸ್ತುಗಳು ತುಂಬಿಕೊಂಡಿದ್ದವು.

      ದೋಣಿ ಸಹಿತವಾಗಿ  ವಿವಿಧ ಪರಿಕರಗಳನ್ನು ಬಳಸಿಕೊಂಡು ಬೆಳಗ್ಗೆಯಿಂದಲೇ ಕೆರೆಯ ಸ್ವತ್ಛತಾ ಕಾರ್ಯ ನಡೆಸಿ, ವಿವಿಧ ತ್ಯಾಜ್ಯ ವಸ್ತುಗಳನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ. ಕೆರೆಯ ದಡದಲ್ಲಿ ದಟ್ಟಾವಾಗಿ ಬೆಳೆದಿದ್ದ ಕಳೆ ಕಿತ್ತು, ನೀರನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸುವ ಪ್ರಯತ್ನ ನಡೆಸಿದರು. ಈ ಮೂಲಕ ಸೈನಿಕರು ದೇಶದ ಗಡಿ ಕಾಯುವುದು ಮಾತ್ರವಲ್ಲದೇ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೂ ಮುಂದಿದ್ದೇವೆ ಎಂಬುದನ್ನು ಸಾಬೀತು ಮಾಡಿದರು. ದೋಣಿ ಸಹಿತವಾಗಿ ವಿವಿಧ ಪರಿಕರಗಳನ್ನು ಬಳಸಿಕೊಂಡು ಕೆರೆಯ ಸ್ವತ್ಛತಾ ಕಾರ್ಯ ನಡೆಸಿ, ವಿವಿಧ ತ್ಯಾಜ್ಯ ವಸ್ತುಗಳನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.

      ಆಗಾಗೇ ಸ್ವತ್ಛತಾ ಕಾರ್ಯ ನಡೆಸುತ್ತಿದ್ದರೂ, ತ್ಯಾಜ್ಯ ಬೀಳುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಇದು ಕೆರೆಯ ಸುತ್ತಲಿನ ಪರಿಸರ ಕಲುಷಿತವಾಗುವಂತೆ ಮಾಡಿದೆ. ಕೆರೆಗೆ ಯಾವುದೇ ರೀತಿಯಲ್ಲೂ ಅನಾಹುತ ಆಗದಂತೆ ಸೈನಿಕರು ಎಷ್ಟೇ ಜಾಗೃತಿ ಹಾಗೂ ಎಚ್ಚರ ವಹಿಸಿದರೂ, ಬೇರೆ ಬೇರೆ ಮೂಲಗಳಿಂದ ಕಲುಷಿತವಾಗುತ್ತಲೇ ಇದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

LEAVE A REPLY

Please enter your comment!
Please enter your name here