ಬೆಂಗಳೂರು :
ಯುವತಿ ಮೇಲೆ ಮೌಲ್ವಿಯೊಬ್ಬ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿದ ಭೀಕರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕೋರಮಂಗಲದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಣ ಸಂಸ್ಥೆಗಳು (ಟ್ಯುಟೋರಿಯಲ್) ಮತ್ತು ಮದರಸಾ ನಡೆಸುತ್ತಿರುವ ಫರ್ವೇಜ್ ಎಂಬ ಮೌಲ್ವಿ ಯುವತಿಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ವ್ಯಕ್ತಿ.
4 ವರ್ಷಗಳ ಹಿಂದೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಬಿಹಾರ ಮೂಲದ 26 ವರ್ಷದ ಯುವತಿಯನ್ನು ಕರೆತಂದಿದ್ದ ಪರ್ವೇಜ್, ಆಕೆಯ ಮೇಲೆ ಆತ್ಯಾಚಾರ ನಡೆಸಿ ಐರನ್ ಬಾಕ್ಸ್ನಿಂದ ಮೈ ಮೇಲೆ ಸುಟ್ಟಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ಹಲವು ತಿಂಗಳಿಂದ ನಿರಂತರ ಹಿಂಸೆ ನೀಡುತ್ತಿದ್ದನಂತೆ.
ಫರ್ವೇಜ್ ಪತ್ನಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ಯುವತಿಯನ್ನು ಕೆಲಸಕ್ಕೆಂದು ಮನೆಗೆ ಕರೆತಂದು ಇಟ್ಟುಕೊಂಡಿದ್ದ ಫರ್ವೇಜ್ ಆಕೆಯನ್ನು ಮನೆಯಿಂದ ಆಚೆ ಹೋಗಲು ಬಿಡುತ್ತಿರಲಿಲ್ಲ. ಪತ್ನಿ ಆಫೀಸಿಗೆ ಹೋದ ನಂತರ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ನಡೆಸುತ್ತಿದ್ದ ಎನ್ನಲಾಗಿದೆ
ಸದ್ಯ ಸಂತ್ರಸ್ತೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ದೂರು ನೀಡಿದ ಆಧಾರದ ಮೇಲೆ ಕೋರಮಂಗಲ ಪೊಲೀಸರು ಫರ್ವೇಜ್ ನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ