ಬೆಂಗಳೂರು :
ಇಡೀ ರಾಜ್ಯಕ್ಕೆ ಲಾಕ್ ಡೌನ್, ಸೀಲ್ ಡೌನ್, ಪೊಲೀಸರ ಕಠಿಣ ಕ್ರಮ, ಪೊಲೀಸ್ ಆಕ್ಷನ್ ಅಂದರೆ ಏನು ಅಂತ ತೋರಿಸುವುದಾಗಿ ಗೃಹ ಸಚಿವ ಬೊಮ್ಮಾಯಿ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕಳೆದ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದ್ದು, ಘಟನೆ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇಂದು ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯಕ್ಕೆ ಲಾಕ್ ಡೌನ್, ಸೀಲ್ ಡೌನ್, ಪೊಲೀಸರ ಕಠಿಣ ಕ್ರಮ, ಪೊಲೀಸ್ ಆಕ್ಷನ್ ಅಂದರೆ ಏನು ಅಂತ ತೋರಿಸುತ್ತೇವೆ. ಇದೊಂದು ರೀತಿ ಯುದ್ದದ ಸಮಯ, ಸರ್ಕಾರ, ಸರ್ಕಾರದ ಕ್ರಮ, ಅಧಿಕಾರಿಗಳ ವಿರುದ್ಧ ಪುಂಡಾಟ ನಡೆಸಿದರೆ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠೋರ ಕ್ರಮ ಕೈಗೊಳ್ಳಲಾಗುತ್ತದೆ ಸಚಿವ ಬೊಮ್ಮಾಯಿ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬ್ಯಾಟರಾಯನಪುರದಲ್ಲಿ ಒಟ್ಟು 19 ಪಾಸಿಟಿವ್ ಕೇಸ್ ಇದೆ. ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಕ್ಲಸ್ಟರ್ ಕ್ವಾರೆಂಟೈನ್ ಮಾಡಿ ಹೆಚ್ಚಿನ ಪೊಲೀಸ್ ಪೋರ್ಸ್ ಹಾಕಿ ಈ ಏರಿಯಾದ ಸುತ್ತಳತೆ ಹೆಚ್ಚಿಸಲು, ಆಹಾರ ಒದಗಿಸಲುವ ನಿಟ್ಟಿನಲ್ಲಿ ಸಂಜೆ 7 ಗಂಟೆಯವರೆಗೆ ಸಭೆ ನಡೆಸಲಾಗಿತ್ತು. ಇಲ್ಲಿ 58 ಜನರಿಗೆ ಸೆಕೆಂಡರಿ ಕ್ವಾರೆಂಟನ್ ಮಾಡಬೇಕಾಗಿತ್ತು. ಮೊದಲು 15 ಮಂದಿ ಅಧಿಕಾರಿಗಳ ಜೊತೆ ತೆರಳಿದ್ದರು. ಆ ಬಳಿಕ 10 ಮಂದಿ ಕ್ವಾರೆಂಟೈನ್ ಗೆ ತೆರಳಲು ಸಿದ್ದರಿದ್ದರು. ಆದರೆ, ಆಮೇಲೆ ಕೆಲವರು ಬಂದು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿ ಗಲಾಟೆ ನಡೆಸಿದ್ದಾರೆ. ಈ ವೇಳೆ, ಸುಮಾರು 100 ಜನಕ್ಕಿಂತ ಹೆಚ್ಚು ಜನ ಗುಂಪು ಸೇರಿದ್ದಾರೆ. ಪೆಂಡಾಲ್ ಕಿತ್ತಿದ್ದಾರೆ, ಸಿಸಿ ಕ್ಯಾಮರಾ ನಾಶಗೊಳಿಸಿ, ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ದಾಳಿ ನಡೆಸಿ ಪುಂಡಾಟ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನನಗೆ ಸುದ್ದಿ ಬಂದ ಕೂಡಲೇ ಕಮೀಷರನ್ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚಿಸಿ ಎಲ್ಲರನ್ನು ಅರೆಸ್ಟ್ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಲಾಯಿತು. ಈವರೆಗೆ 54 ಮಂದಿ ಬಂಧಿಸಿದ್ದು, ಐವರನ್ನು ಅರೆಸ್ಟ್ ಮಾಡಲಾಗುತ್ತಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಅರೆಸ್ಟ್ ಮುಂದುವರೆಯಲಿೆದೆ. ಇನ್ನು ಹಲವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅವರ ಪತ್ತೆ ಮಾಡಿ ಅರೆಸ್ಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ