ಬೆಂಗಳೂರು:
ಇಂದಿರಾ ಕ್ಯಾಂಟಿನ್ ಊಟ ನಿರ್ಲಕ್ಷಿಸಿದ ಕಾರ್ಪೋರೇಟರ್ಸ್, ಮನೆಯತ್ತ ಪ್ರಯಾಣ ಬೆಳೆಸಿರುವ ಘಟನೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.
ಇದರಿಂದಾಗಿ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ತಾರಾ ಹೋಟೆಲ್‌ಗಳಿಂದ ತರಿಸುತ್ತಿದ್ದ ಮೃಷ್ಟಾನ್ನ ಭೋಜನಕ್ಕೆ ಕತ್ತರಿ ಹಾಕಿ ಇಂದಿರಾ ಕ್ಯಾಂಟೀನ್‌ನಿಂದಲೇ ಊಟ ನೀಡುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರಯತ್ನಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲ್ ಸಭೆ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ಸದರಿ ಪಾಲಿಕೆವತಿಯಿಂದ ಒಟ್ಟು 500 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಭೆಯ ನಂತರ ಊಟ ಪ್ರಾರಂಭವಾದರೂ ಸಹ ಯಾವೊಬ್ಬ ಸದಸ್ಯರೂ ಕೂಡಾ ಊಟಕ್ಕೆ ತೆರಳದ ಕಾರಣ, ಸ್ವತಃ ಮೇಯರ್ ಅವರೇ ಮುಂದೆ ನಿಂತು ಊಟ ಮಾಡಿ ಎಂದು ಹೇಳಿದರೂ ಸಹ ಅವರ ಮಾತಿಗೂ ಕಿಮ್ಮತ್ತು ನೀಡದೇ ತಮ್ಮ-ತಮ್ಮ ಮನೆಯತ್ತ ಪ್ರಯಾಣ ಬೆಳೆಸಿದರು. ತಂದ ಊಟವನ್ನೆಲ್ಲಾ ಅಲ್ಲಿದ್ದ ಸೆಕ್ಯುರಿಟಿ ಮತ್ತು ಸಿಬ್ಬಂದಿಗೆ ಬಡಿಸಲಾಯಿತು.
ಇಷ್ಟುದಿನ ಕಾರ್ಪೊರೇಟರ್ ಗಳಿಗೆ ಫ್ರೀ ಊಟವನ್ನು ಲಕ್ಷುರಿ ಹೋಟೆಲ್‌ಗಳಿಂದ ತರಿಸಿಕೊಳ್ಳಲಾಗುತ್ತಿತ್ತು, ಪ್ರತಿ ಊಟಕ್ಕೆ 280ರೂ ವೆಚ್ಚವಾಗುತ್ತಿತ್ತು, ಇದರಿಂದ ಪಾಲಿಕೆಗೆ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತಿತ್ತು ಹಾಗಾಗಿ ಈ ದುಂದುವೆಚ್ಚವನ್ನು ತಡೆಯಲು ಮೇಯರ್ ನಿರ್ಧರಿಸಿದ್ದು ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಊಟವನ್ನು ಮಾಡಲು ನಿರ್ದೇಶನ ನೀಡಿದ್ದರು.
ಇಂದಿರಾ ಕ್ಯಾಂಟೀನ್ ಊಟದ ಜತೆಗೆ ಚಪಾತಿ, ಮುದ್ದೆ, ಸ್ವೀಟ್ ನೀಡಲು ನಿರ್ಧರಿಸಿದ್ದರು,, ಇಂದಿರಾ ಕ್ಯಾಂಟೀನ್ ಊಟಕ್ಕೆ ಮಾಸಿಕ ಕೇವಲ 5 ಸಾವಿರ ರೂ ಖರ್ಚಾಗುತ್ತದೆ. ಇದರ ಜತೆಗೆ ಮುದ್ದೆ, ಸೊಪ್ಪಿನ ಸಾರು, ಚಪಾತಿ, ಗ್ರೇವಿ, ಅನ್ನ ರಸಂ, ಸಾಂಬಾರ್, ಮುದ್ದೆ, ಸೊಪ್ಪಿನ ಸಾರು, ಒಂದು ಬಗೆಯ ಸ್ವೀಟ್ ನೀಡಲಾಗುತ್ತದೆ. ಇಷ್ಟಿದ್ದರೂ ಈ ಊಟ ಮಾಡಲು ಬಿಬಿಎಂಪಿ ಸದಸ್ಯರು ಒಪ್ಪಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ