ಬೆಳಗಾವಿ:
ಬೆಳಗಾವಿ ರಾಜ್ಯ ರಾಜಕಾರಣದಲ್ಲಿ ವಿವಾದಿತ ಕೇಂದ್ರಬಿಂದುವಾಗಿರುವ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಪರೇಷನ್ ಕಮಲ ದ ಬಗ್ಗೆ ಇಂದು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೈದ್ರಾಬಾದ್ನಲ್ಲಿದ್ದಾಗ ಬಿಜೆಪಿ ಮುಖಂಡರೇ ನೇರವಾಗಿ ನನಗೆ ಕರೆ ಮಾಡಿ ಆಫರ್ ಕೊಟ್ಟಿದ್ದರು. ಫೋನ್ ಮಾಡಿ, ಮೇಸೆಜ್ ಮೂಲಕ 30 ಕೋಟಿ ರೂ. ಹಣ ಮತ್ತು ಸಚಿವ ಸ್ಥಾನ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಆದರೆ, ನಾನು ಬಿಜೆಪಿಯ ಆಮಿಷಕ್ಕೆ ಬಗ್ಗಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಅನೇಕ ಶಾಸಕರು ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆ. ಅಪರೇಷನ್ ಕಮಲ ನಿಸರ್ಗಕ್ಕೆ ವಿರುದ್ಧವಾಗಿದ್ದು. ಆದ್ದರಿಂದ ನಾನು ಪಕ್ಷಬಿಟ್ಟು ಬೇರೆ ಎಲ್ಲೂ ಬರುವುದಿಲ್ಲ ಎಂದು ಆಫರ್ ತಿರಸ್ಕರಿಸಿದ್ದೇ ಎಂದು ಹೆಬ್ಬಾಳ್ಕರ್ ಹೇಳಿದರು.
ನನಗೆ ಬಂದ ಮೆಸೇಜ್ ಹಾಗೂ ಫೋನ್ ಕರೆಗಳನ್ನು ಪಕ್ಷದ ಮುಖಂಡರಿಗೆ ತೋರಿಸಿದ್ದೇನೆ. ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಎಲ್ಲಿಯೂ ಹೊಗುವುದಿಲ್ಲ. ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ