ಬಳ್ಳಾರಿ :
ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯತಿ, ಹಡಗಲಿ, ಹರಪನಹಳ್ಳಿ ಮತ್ತು ಸಂಡೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಈ ಹಿಂದೆಯೂ ಇಲ್ಲಿ ಕಾಂಗ್ರೆಸ್ ಇತ್ತು, ಈಗಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನಲಾಗಿದೆ.
ಕಮಲಾಪುರ ಪಟ್ಟಣ ಪಂಚಾಯತಿಯ 20 ವಾರ್ಡ್ ಗಳ ಪೈಕಿ 15 ಕಾಂಗ್ರೆಸ್, 4 ಪಕ್ಷೇತರರು, ಬಿಜೆಪಿಗೆ 1 ಸ್ಥಾನ ಲಭಿಸಿದೆ.
ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
23 ವಾರ್ಡ್ ಗಳಿರುವ ಹಡಗಲಿ ಪುರಸಭೆ 14 ಸ್ಥಾನಗಳನ್ನು ಕಾಂಗ್ರೆಸ್, 9ಸ್ಥಾನಗಳನ್ನು ಬಿಜೆಪಿ ಪಡೆದಿದೆ.
ಇಲ್ಲಿಯೂ ಕೂಡ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಸಂಡೂರು ಪಟ್ಟಣ ಪಂಚಾಯತಿ ಒಟ್ಟು 23 ವಾರ್ಡ್ ಗಳ ಪೈಕಿ, 12 ಸ್ಥಾನಗಳನ್ನು ಕಾಂಗ್ರೆಸ್, 10 ಸ್ಥಾನಗಳನ್ನು ಬಿಜೆಪಿ, 1 ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಪಡೆದಿದೆ. ಒಂದು ವಾರ್ಡ್ ಸಮಬಲವಾಗಿದ್ದ ಕಾರಣ ಟಾಸ್ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಪರಿಣಾಮ ಇಲ್ಲಿಯೂ ಇದೀಗ ಕಾಂಗ್ರೆಸ್ ಸರಳ ಬಹುಮತದಿಂದ ಅಧಿಕಾರಕ್ಕೆ ಬಂದಿದೆ.
ಹರಪನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ ಒಂದು ಪಕ್ಷೇತರರು ಇಬ್ಬರು ಮತ್ತು 10 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ