5 ವರ್ಷಗಳಲ್ಲಿ ಬಿಜೆಪಿ ಸಚಿವರ ಆಸ್ತಿ 93 ಕೋಟಿ ರೂ ಹೆಚ್ಚಳ..!

ಚಂಡೀಗಢ

    ಹರಿಯಾಣ ವಿಧಾನಸಭೆಗೆ ಸೋಮವಾರ ಚುನಾವಣೆ ನಡೆಯುತ್ತಿದೆ. ಮುಖ್ಯವಾಗಿರುವ ಸಂಗತಿ ಎಂದರೆ ಹರಿಯಾಣದ ಸಚಿವರೂ ಆಗಿರುವ ಬಿಜೆಪಿ ಶಾಸಕ ಕ್ಯಾಪ್ಟನ್ ಅಭಿಮನ್ಯು ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ 93.04 ಕೋಟಿ ರೂ ಗಳಷ್ಟು ಹೆಚ್ಚಾಗಿದೆ ಎಂದು ಅಸೋಷಿಯೇಷನ್ ಫಾರ್ ಡೆಮಾಕ್ರೆಟಿಕ್ (ಎಡಿಆರ್) ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

    ನಾಡಿದ್ದು ನಡೆಯುವ ಚುನಾವಣೆಯಲ್ಲಿ 62 ಹಾಲಿ ಶಾಸಕರು ಸ್ಪರ್ಧೆ ಮಾಡುತ್ತಿದ್ದು ಅವರ ಸರಾಸರಿ ಆಸ್ತಿ ಬೆಳವಣಿಗೆ 3.62 ಕೋಟಿ ರೂ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ ಸಚಿವರೂ ಆಗಿರುವ ಅಭಿಮನ್ಯು ಅವರು 2014 ರ ವಿಧಾನಸಭಾ ಚುನಾವಣಾ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ 77 ಕೋಟಿ ರೂ ಎಂದು ಘೋಷಣೆ ಮಾಡಿಕೊಂಡಿದ್ದು ಈಗ ಅವರೇ 2019 ರ ಚುನಾವಣೆಯಲ್ಲಿ 170 ಕೋಟಿ ರೂ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಸಾರಿಗೆ ವ್ಯವಹಾರ, ಬಾಡಿಗೆ, ಬಡ್ಡಿ, ಕೃಷಿ ಆದಾಯವನ್ನು ಅವರು ಪ್ರಮಾಣಪತ್ರದಲ್ಲಿ ಆದಾಯದ ಮೂಲಗಳನ್ನಾಗಿ ಉಲ್ಲೇಖ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap