‘ವಿಧಾನಸೌಧಕ್ಕೆ ಬಾಂಬ್ ಇಡ್ತೀವಿ, ತಾಕತ್ತಿದ್ದರೆ ತಡೀರಿ’ : ಫೇಸ್ ಬುಕ್ ಪೋಸ್ಟ್!!

ಬೆಂಗಳೂರು :

       ವಿಧಾನಸೌಧಕ್ಕೆ ಬಾಂಬ್ ಇಡುತ್ತೇವೆ‌ ಎಂದು‌ ದುಷ್ಕರ್ಮಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಬುಧವಾರ ನಡೆದಿದೆ.

       ಇನ್ನೊಂದು ವಾರದಲ್ಲಿ ವಿಧಾನ ಸೌಧಕ್ಕೆ ಬಾಂಬ್ ಇಡ್ತೀವಿ ತಾಕತ್ತಿದ್ದರೆ ತಡೀರಿ ಎಂದು ಕಿಡಿಗೇಡಿಯೊಬ್ಬ ಫೇಸ್ ಬುಕ್ ಪೋಸ್ಟ್ ಹಾಕಿದ್ದಾನೆ. ಇನ್ನು ಈ ಪೋಸ್ಟ್ ಸಂಬಂಧ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

      ಟಕ್ಲಾ ಚಾಟ್ ಎಂಬ ಫೇಸ್ ಬುಕ್ ಖಾತೆ ಇದಾಗಿದೆ. ಹೀಗಾಗಿ ಈ ಖಾತೆ ಯಾರದ್ದು, ಖಾತೆ ತೆರೆದ ವ್ಯಕ್ತಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಸಂದೇಶ ರವಾನಿಸಿದ್ದ ಫೇಸ್‌ಬುಕ್‌ ಖಾತೆ ಹೊಂದಿರುವವನ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ‌ ಕೈಗೊಂಡಿದ್ದಾರೆ.

       ವಿಧಾನಸೌಧಕ್ಕೆ ಬಾಂಬ್ ಇಡ್ತೀವಿ, ಅಥವಾ ವಿಧಾನಸೌಧದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಗಳು ಮೊದಲೇನಲ್ಲ. ಇದೀಗ ಇಂತಹದ್ದೇ ಘಟನೆ ಮತ್ತೆ ನಡೆದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ