ಬೆಂಗಳೂರು :
ಲಾಕ್ ಡೌನ್ ನಿಯಮ ಉಲ್ಲಂಘಿಸಿದಕ್ಕೆ ಸೀಜ್ ಆಗಿದ್ದ ವಾಹನಗಳನ್ನು ನಾಳೆಯಿಂದ ಪೊಲೀಸರು ಮಾಲೀಕರಿಗೆ ನೀಡಲಿದ್ದಾರೆ.
ಈ ಕುರಿತು ಕಮಿಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದು, ಲಾಕ್ ಡೌನ್ ವೇಳೆ ಸೀಜ್ ಆದ ವಾಹನಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಮೇ. 1ರಿಂದ ಸೀಜ್ ಆಗಿರುವ ವಾಹನಗಳನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ನೀಡುವ ಮೊದಲು ವಾಹನಗಳ ಡಾಕ್ಯೂಮೆಂಟ್ಸ್ ಪರಿಶೀಲಿಸಲಿದ್ದಾರೆ. ಇದಕ್ಕೆ ಬೇಕಾದ ಪೇಪರ್ ವರ್ಕ್ ಹಾಗೆ ನ್ಯಾಯಾಲಯದ ಪ್ರೊಸೆಸ್ ಏನಿದೆ ಅದನ್ನ ಈಗಾಗ್ಲೇ ಮಾಡಿದ್ದಾರೆ. ಅಗತ್ಯ ಡಾಕ್ಯುಮೆಂಟ್ ಇರುವವರ ಜಪ್ತಿಯಾದ ವಾಹನ ಮಾಲಿಕರ ಕೈ ಸೇರಲಿದೆ.
It’s decided to return the Corona seized vehicles from 1/5/20 onwards. Those seized first will be returned first.The documents will be verified and vehicle returned. This has approval of Hon CM and HM. We are doing the paperwork to ease the process.
— Bhaskar Rao IPS (@deepolice12) April 30, 2020
ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ರಸ್ತೆಗೆ ಬಂದ 47,258 ಸಾವಿರ ಜನರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಲ್ಲಿ 1168 ಆಟೋಗಳು ಹಾಗೂ 44,081 ಬೈಕ್‌ಗಳು ಇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
