ಚಿಕ್ಕಬಳ್ಳಾಪುರ :
ಜನಸಾಮಾನ್ಯರು ತಮ್ಮ ಕಷ್ಟಗಳನ್ನ ಹೇಳಿಕೊಳ್ಳಲು ಹೋರಾಟ ಮಾಡದಿದ್ದರೆ, ಸರ್ಕಾರ ಸಹ ಕಣ್ಣು ತೆರೆಯಲ್ಲ ಎಂದು ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಅದೇ ರೀತಿ ಜನಸಾಮಾನ್ಯರು ಸಹ ತಮ್ಮ ಕಷ್ಟಗಳನ್ನ ಹೇಳಿಕೊಳ್ಳದಿದ್ದರೆ ಸರ್ಕಾರ ಸಹ ಕಣ್ಣು ತೆರೆಯಲ್ಲ ಎಂದು ಭಾರತ್ ಬಂದ್ ಅಂಗವಾಗಿ ಕಾರ್ಮಿಕ ಸಂಘಟನೆಗಳು ಮಾಡಿದ ಹೋರಾಟಕ್ಕೆ ಬಿಜೆಪಿ ಸಂಸದರು ಬೆಂಬಲ ಸೂಚಿಸಿದರು.
ಕಾರ್ಮಿಕರಿಗೆ ದುಡಿಮೆಗೆ ಶ್ರಮಕ್ಕೆ ತಕ್ಕ ಹಾಗೆ ಸರಿಯಾದ ವೇತನ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ನೌಕರಿಗಳಿದ್ದು ಅವರಿಗೆ ಉದ್ಯೋಗ ಭದ್ರೆತಗಳಿಲ್ಲ. ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕ ವರ್ಗ ಕಷ್ಟಗಳಿಗೆ ಗುರಿಯಾಗುತ್ತಿದೆ. ಸರ್ಕಾರ ಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಗಮನಹರಿಸಬೇಕಿದ್ದು ಸರಿಯಾದ ಸಂಬಳ ಕೊಡುವ ಕೆಲಸ ಮಾಡಬೇಕಿದೆ ಎಂದರು.
ಇನ್ನು ಕಾರ್ಮಿಕರು ಹೋರಾಟ ಮಾಡಿ ಎಂದು ನಾನು ಹೇಳಲ್ಲ ಅದಕ್ಕೆ ಪ್ರೋತ್ಸಾಹ ಕೊಡಲ್ಲ. ಕಾರ್ಮಿಕರಿಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಕಾರ್ಮಿಕರಿಗೆ ಸರಿಯಾದ ವೇತನ, ಆರೋಗ್ಯ ಸೇವೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ