ಬೆಂಗಳೂರು:
ವಿದ್ಯಾ ದಾನ ಮಹಾದಾನ ಎಂಬುದು ಮರೆತೇ ಹೋಗಿರುವ ಈ ಕಾಲದಲ್ಲಿ ಸದಾ ಮೋಜು ಮಸ್ತಿ ಮಾಡುವ ತಾಣಗಳಾಗಿರುವ ಮಾಲಗಳು ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದೆ ಅದೆ ಅನಾಥ ಮಕ್ಕಳಿಗೆ ಪುಸ್ತಕ ದಾನ ಮಾಡುವುದು. ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಮಾಲ್ ಗಳಲ್ಲಿ ಪುಸ್ತಕ ದಾನ ಅಭಿಯಾನವನ್ನು ಆಯೋಜಿಸಲಾಗಿದೆ .ಒಂದು ತಿಂಗಳ ಕಾಲ ನಗರದ ಪ್ರಮುಖ ಶಾಪಿಂಗ್ ಮಾಲ್ ಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಗರುಡಾ ಮಾಲ್ ನಲ್ಲಿ ಅಂಚೆ ಪೆಟ್ಟಿಗೆ ರೀತಿಯಲ್ಲಿ ಪೆಟ್ಟಿಗೆಯೊಂದನ್ನು ಇಡಲಾಗಿದೆ. ಇದರಲ್ಲಿ ಆಸಕ್ತರು ಪುಸ್ತಕ ದಾನ ಮಾಡಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








