ಬೆಂಗಳೂರು:
ಅಕಾಲಿಕ ಮಳೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟೊಮೆಟೋ ಬೆಲೆ ದಿಢೀರ್ ಗಗನಕ್ಕೇರಿತ್ತು. ಆದ್ರೇ ಈಗ ಹೊರ ಜಿಲ್ಲೆಗಳಿಂದ ಹೆಚ್ಚಿನ ಟೊಮೆಟೋ ಪೂರೈಕೆಯಿಂದಾಗಿ ರೂ.130ರವರೆಗೂ ಇದ್ದ ಬೆಲೆ 20 ರಿಂದ 30 ರೂ ಗೆ ಇಳಿಕೆಯಾಗಿದೆ.
ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಪೂರೈಕೆಯಾಗುತ್ತಿರುವ ಕಾರಣ, ಎರಡು ಹಾಗೂ ಮೂರನೇ ದರ್ಜೆಯ ಟೊಮೆಟೋ ಬೆಲೆ ಕಡಿಮೆಯಾಗಿದೆ.ಕೆಜಿಗೆ ರೂ.130ರವರೆಗೂ ಹೋಗಿದ್ದಂತ ಬೆಲೆ ಈಗ ರೂ.60 ರಿಂದ 100ರವರೆಗೆ ಮಾರಾಟ ಆಗುತ್ತಿದೆ.
ಇನ್ನೂ ಕೆ ಆರ್ ಮಾರುಕಟ್ಟೆ, ಕಲಾಸಿಪಾಳ್ಯ ಹಾಗೂ ಯಶವಂತಪುರ ಸೇರಿದಂತೆ ತರೆ ಸಗಟು ಮಾರುಕಟ್ಟೆಗೆ ಗುಣಮಟ್ಟದ ಟೊಮ್ಯಾಟೋ ಜೊತೆಗೆ, ಎರಡು, ಮೂರನೆ ದರ್ಜೆಯ ಉತ್ಪನ್ನಗಳೂ ಸರಬರಾಜಾಗಿವೆ. ಈ ಹಿನ್ನಲೆಯಲ್ಲಿ 22 ಕೆಜಿ ಬಾಕ್ಸ್ ಗೆ ರೂ.1200 ರಿಂದ 1300ರಕ್ಕೆ ತಲುಪಿದೆ.
ಇದಲ್ಲದೇ ಜಯನಗರ, ಗಾಂಧಿಬಜಾರ್, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ವಿವಿಧೆಡೆಯಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೋ ದರ ಕೆಜಿಗೆ ರೂ.20 ರಿಂದ 30ವರೆಗೆ ಕಡಿಮೆಯಾಗಿದೆ. ಆದ್ರೇ ಗುಣಮಟ್ಟದ ಟೊಮೆಟೋ ಬೆಲೆ ರೂ.100 ಇದೆ. ಮೂರನೇ ದರ್ಜೆಯದ್ದು ರೂ.60 ರಿಂದ 80 ಇದೆ. ಇನ್ನೊಂದು ವಾರದಲ್ಲಿ ಈ ಬೆಲೆಯೂ ಕಡಿಮೆಯಾಗಿ, ಗ್ರಾಹಕರಿಗೆ ಬಿಗ್ ರಿಲೀಫ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
